ಬ್ರೆಜಿಲ್‌ನ ಬೆಲೊ ಹೊರಿಜಾಂಟೆಯಲ್ಲಿ ನಡೆದ ದುರಂತ ಘಟನೆಯಲ್ಲಿ, ವಸತಿ ಕಟ್ಟಡಕ್ಕೆ ಸಣ್ಣ ವಿಮಾನವೊಂದು ಡಿಕ್ಕಿ ಹೊಡೆದು ಪತನಗೊಂಡಿದೆ.
ಈ ಅಪಘಾತದಲ್ಲಿ ಪೈಲಟ್ ಮತ್ತು ಸಹ-ಪೈಲಟ್ ಸೇರಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನದಲ್ಲಿ ಒಟ್ಟು ಐದು ಜನರು ಪ್ರಯಾಣಿಸುತ್ತಿದ್ದರು.
ನಗರ ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಪಂಪುಲ್ಹಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಈ ದುರ್ಘಟನೆ ಸಂಭವಿಸಿದೆ. ಸಾವೊ ಪಾಲೊಗೆ ತೆರಳುತ್ತಿದ್ದ ವಿಮಾನ ಇದಾಗಿತ್ತು. ಈ ವಿಮಾನ ಪತನದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಘಟನೆಯ ತೀವ್ರತೆಯನ್ನು ಎತ್ತಿ ತೋರಿಸುತ್ತಿವೆ.
PublicNext
06/05/2026 07:19 am
LOADING...