ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಭಾರತ-ವಿಯೆಟ್ನಾಂ ನಡುವೆ ಡಿಜಿಟಲ್ ಕ್ರಾಂತಿ - UPI ಸಂಪರ್ಕಕ್ಕೆ ಮೋದಿ-ಲಾಮ್ ಒಪ್ಪಿಗೆ!

ನವದೆಹಲಿ : ಭಾರತ ಮತ್ತು ವಿಯೆಟ್ನಾಂ ನಡುವಿನ ಬಾಂಧವ್ಯ ಹೊಸ ಮೈಲಿಗಲ್ಲು ತಲುಪಿದೆ. ಪ್ರಧಾನಿ ಮೋದಿ ಅವರು ವಿಯೆಟ್ನಾಂ ಅಧ್ಯಕ್ಷ ತೋ ಲಾಮ್ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿ, ಭಾರತದ ಯುಪಿಐ (UPI) ಮತ್ತು ವಿಯೆಟ್ನಾಂನ ವೇಗದ ಪಾವತಿ ವ್ಯವಸ್ಥೆಗಳು ಶೀಘ್ರದಲ್ಲೇ ಸಂಪರ್ಕಗೊಳ್ಳಲಿವೆ ಎಂದು ಘೋಷಿಸಿದ್ದಾರೆ.

ಈ ಮಹತ್ವದ ಕ್ರಮದಿಂದ ಎರಡೂ ದೇಶಗಳ ನಡುವೆ ಆರ್ಥಿಕ ಸಹಕಾರಕ್ಕೆ ಹೊಸ ಆಯಾಮ ದೊರೆಯಲಿದ್ದು, ರಾಜ್ಯ-ರಾಜ್ಯ ಮತ್ತು ನಗರ-ನಗರಗಳ ಸಹಕಾರವೂ ಮತ್ತಷ್ಟು ಬಲವರ್ಧನೆಗೊಳ್ಳಲಿದೆ ಎಂದು ಹೇಳಿದರು.

ಆಯಕಟ್ಟಿನ ಪಾಲುದಾರಿಕೆ ಮತ್ತು ಭದ್ರತೆ

ಪ್ರಧಾನಿ ಮೋದಿ ಅವರು ವಿಯೆಟ್ನಾಂ ಅನ್ನು ಭಾರತದ 'ಆಕ್ಟ್ ಈಸ್ಟ್ ನೀತಿ' (Act East Policy) ಹಾಗೂ 'ವಿಷನ್ ಓಷನ್' (Vision Ocean)ನ ಪ್ರಮುಖ ಆಧಾರಸ್ತಂಭವೆಂದು ಬಣ್ಣಿಸಿದರು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉಭಯ ದೇಶಗಳು ಸಮಾನ ದೃಷ್ಟಿಕೋನ ಹೊಂದಿದ್ದು, ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವ ಮೂಲಕ ಕಾನೂನಿನ ಆಡಳಿತ, ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ನಿರಂತರವಾಗಿ ಕೊಡುಗೆ ನೀಡಲಿವೆ ಎಂದು ಅವರು ತಿಳಿಸಿದರು.

ಪ್ರಾದೇಶಿಕ ಮತ್ತು ಜಾಗತಿಕ ಸಹಕಾರ

ವಿಯೆಟ್ನಾಂ ಸಹಕಾರದೊಂದಿಗೆ ಭಾರತವು ಆಸಿಯಾನ್ (ASEAN) ರಾಷ್ಟ್ರಗಳೊಂದಿಗಿನ ತನ್ನ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಿಂತ ವಿಯೆಟ್ನಾಂಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು.

ಜಾಗತಿಕ ಸವಾಲುಗಳು ಮತ್ತು ಆರ್ಥಿಕ ಅಡೆತಡೆಗಳ ಈ ಯುಗದಲ್ಲಿ, ನಮ್ಮ ಪ್ರತಿಭೆ, ಉತ್ತಮ ಆಡಳಿತ ಮತ್ತು ಆರ್ಥಿಕ ಸುಧಾರಣೆಗಳ ಫಲವಾಗಿ, ಭಾರತ ಮತ್ತು ವಿಯೆಟ್ನಾಂ ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಾಗಿ ಹೊರಹೊಮ್ಮುತ್ತಿವೆ ಎಂದು ನುಡಿದರು.

Edited By : Abhishek Kamoji
PublicNext

PublicNext

06/05/2026 02:58 pm

Cinque Terre

12.01 K

Cinque Terre

1

ಸಂಬಂಧಿತ ಸುದ್ದಿ