ಬೆಂಗಳೂರು/ ಮಂಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಬಳಿಕ ಶಾಸಕರಾಗಿ ಆಯ್ಕೆಯಾದ ಡಿ.ಎನ್.ಜೀವರಾಜ್ ಅವರಿಗೆ ಸ್ಪೀಕರ್ ಅವರು ಪ್ರಮಾಣ ವಚನವನ್ನು ಬೋಧಿಸುತ್ತಿಲ್ಲ. ಆದುದರಿಂದ ನೀವೇ ಮಧ್ಯ ಪ್ರವೇಶಿಸಬೇಕೆಂದು ನಿನ್ನೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜಭವನಕ್ಕೆ ಭೇಟಿ ನೀಡಿ ಗವರ್ನರ್ ಗೆ ಮನವಿ ಮಾಡಿಕೊಂಡ ಬೆನ್ನಲ್ಲೇ ಅತ್ತ ಮಂಗಳೂರಿನಲ್ಲಿರೋ ಸ್ಪೀಕರ್ ಯು.ಟಿ.ಖಾದರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಾನು ಆ ರೀತಿಯಾಗಿ ಹೇಳಿಲ್ಲ. ಶಾಸಕರಿಗೆ ಪ್ರಮಾಣ ವಚನ ಬೋಧಿಸಲು ತಡೆಯೊಡ್ಡಿಲ್ಲ ಮತ್ತು ತಡವನ್ನೂ ಮಾಡಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆಂದು ಸ್ಪೀಕರ್ ಅವರ ಆಪ್ತ ಮೂಲಗಳು ತಿಳಿಸಿವೆ. ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ತಮ್ಮೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆಂದು ಸ್ಪೀಕರ್ ಅವರು ಹೇಳಿದ್ದಾರೆ.
ಶೃಂಗೇರಿ ಅಂಚೆ ಮತಗಳ ಮರು ಎಣಿಕೆಯಲ್ಲಿ ಓಟ್ ಚೋರಿ ನಡೆದಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ನಿನ್ನೆ ಆರೋಪಿಸಿದ್ದರು. ಜೊತೆಗೆ ಅತ್ತ ಚಿಕ್ಕಮಗಳೂರಿನಲ್ಲಿ ಶಾಸಕ ಜೀವರಾಜ್ ಅವರ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿತ್ತು.
PublicNext
06/05/2026 04:48 pm
LOADING...