ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುದ್ಧ ನಿಲ್ಲಿಸುವುದು ಇಸ್ರೇಲ್‌ಗೆ ಕಿಂಚಿತ್ತೂ ಇಷ್ಟವಿಲ್ಲ - ಐಡಿಐ ಸಮೀಕ್ಷೆ

ಟೆಹ್ರಾನ್: ಇಸ್ರೇಲ್ ಡೆಮಾಕ್ರಸಿ ಇನ್‌ಸ್ಟಿಟ್ಯೂಟ್‌ (ಐಡಿಐ) ನಡೆಸಿದ ಸಮೀಕ್ಷೆಯೊಂದು ಪ್ರಮುಖ ಅಂಶವನ್ನು ಬಹಿರಂಗಪಡಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇರಾನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸುವುದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಿಗೆ ಅನುಕೂಲಕರವಾಗುವುದಿಲ್ಲ ಎಂದು ಬಹುತೇಕ ಇಸ್ರೇಲಿಗಳು ಅಭಿಪ್ರಾಯಪಟ್ಟಿದ್ದಾರೆ. ಸಮೀಕ್ಷೆಯ ಪ್ರಕಾರ, ಒಟ್ಟಾರೆ ಶೇಕಡಾ 59 ರಷ್ಟು ಇಸ್ರೇಲಿಗಳು ಈ ಹಂತದಲ್ಲಿ ಯುದ್ಧ ಅಂತ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, ಅದರಲ್ಲಿ ಸುಮಾರು ಮೂರರಲ್ಲಿ ಎರಡು ಭಾಗದಷ್ಟು ಯಹೂದಿ ಪ್ರತಿಕ್ರಿಯಿದಾರರು ಯುದ್ಧವನ್ನು ಈಗಲೇ ನಿಲ್ಲಿಸುವುದು ಇಸ್ರೇಲ್‌ನ ಭದ್ರತಾ ಹಿತಾಸಕ್ತಿಗಳಿಗೆ ಪೂರಕವಲ್ಲ ಎಂದು ಹೇಳಿದ್ದಾರೆ.

ಇಸ್ರೇಲ್‌ನ ಅರಬ್ ನಾಗರಿಕರ ಅಭಿಪ್ರಾಯಗಳಲ್ಲಿ ಮಾತ್ರ ಸ್ಪಷ್ಟ ಭಿನ್ನತೆ ಕಂಡುಬಂದಿದೆ. ಅವರಲ್ಲಿ ಸುಮಾರು ಅರ್ಧದಷ್ಟು ಮಂದಿ, ಯುದ್ಧವನ್ನು ಕೊನೆಗೊಳಿಸುವುದು ಇಸ್ರೇಲ್‌ನ ಹಿತಾಸಕ್ತಿಗಳಿಗೆ ಬಹಳ ಮಟ್ಟಿಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇಕಡಾ 62 ರಷ್ಟು ಮಂದಿ, ಮುಂದಿನ ದಿನಗಳಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಮತ್ತೊಂದು ದೊಡ್ಡ ಮಟ್ಟದ ಸಂಘರ್ಷ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ನ ರಕ್ಷಣಾ ನಿರ್ಧಾರಗಳ ಮೇಲೆ ತಮ್ಮ ಸ್ವಂತ ಸರ್ಕಾರಕ್ಕಿಂತ ಅಮೆರಿಕದ ಪ್ರಭಾವವೇ ಹೆಚ್ಚು ಎಂದು ಶೇಕಡಾ 51 ರಷ್ಟು ಇಸ್ರೇಲಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಮಾಣ, ಹಿಂದೆ ಅಕ್ಟೋಬರ್ ತಿಂಗಳಿನಲ್ಲಿ ಶೇಕಡಾ 44 ಆಗಿತ್ತು. ಇನ್ನು ಕೇವಲ ಶೇಕಡಾ 18 ರಷ್ಟು ಮಂದಿ ಮಾತ್ರ ಇಸ್ರೇಲ್ ಸರ್ಕಾರವೇ ಹೆಚ್ಚಿನ ಪ್ರಭಾವ ಹೊಂದಿದೆ ಎಂದು ಹೇಳಿದ್ದಾರೆ.

ಜನಾಂಗೀಯ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ, ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇಕಡಾ 72 ರಷ್ಟು ಮಂದಿ, ಇಸ್ರೇಲ್ ಬಗ್ಗೆ ಅಮೆರಿಕನ್ನರಲ್ಲಿ ಹೆಚ್ಚುತ್ತಿರುವ ನಕಾರಾತ್ಮಕ ಮನೋಭಾವಗಳು ತೀವ್ರ ಚಿಂತೆಗೆ ಕಾರಣವಾಗಿವೆ ಎಂದು ಹೇಳಿದ್ದಾರೆ. ಲೆಬನಾನ್ ವಿಚಾರದಲ್ಲಿಯೂ ಇಸ್ರೇಲಿಗಳಲ್ಲಿ ಆಶಾವಾದ ಕಡಿಮೆಯಾಗಿದೆ. ಹಿಜ್ಬೊಲ್ಲಾವನ್ನು ನಿಶಸ್ತ್ರೀಕರಣಗೊಳಿಸುವುದನ್ನು ಒಳಗೊಂಡ ಶಾಶ್ವತ ಒಪ್ಪಂದ ಸಾಧ್ಯತೆ ಬಹಳ ಕಡಿಮೆ ಅಥವಾ ಅಸಾಧ್ಯ ಎಂದು ಮೂರರಲ್ಲಿ ಎರಡು ಭಾಗದಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಯಹೂದಿ ಪ್ರತಿಕ್ರಿಯಿದಾರರಲ್ಲಿ ಸುಮಾರು ಶೇಕಡಾ 80 ರಷ್ಟು ಮಂದಿ ಕೂಡ ಇದೇ ಅಭಿಪ್ರಾಯವನ್ನು ದೃಢಪಡಿಸಿದ್ದಾರೆ.

Edited By : Nagaraj Tulugeri
PublicNext

PublicNext

06/05/2026 10:47 am

Cinque Terre

14.82 K

Cinque Terre

0

ಸಂಬಂಧಿತ ಸುದ್ದಿ