VIDEO : ಚೀನಾದ ಸಿಚುವಾನ್ ಪ್ರಾಂತ್ಯದ ಗುವಾಂಗ್‌ಆನ್ ನಗರದ ಹುವಾಯಿಂಗ್ ಅಗೇಟ್ ರಾಕ್‌ನಲ್ಲಿ ಮೇ 3 ರಂದು "ವಾಟರ್‌ಫಾಲ್ ಸ್ವಿಂಗ್" ಆಟವಾಡುತ್ತಿದ್ದ ಯುವತಿಯೊಬ್ಬರು ದುರಂತ ಸಾವನ್ನಪ್ಪಿದ್ದಾರೆ. ಆಟದ ಹಗ್ಗ ತುಂಡಾದ ಪರಿಣಾಮ, ಆಕೆ ಎತ್ತರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಘಟನೆಯ ತಕ್ಷಣವೇ ಯುವತಿ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದ ಸಿಬ್ಬಂದಿ ಕೂಡಲೇ ಅವರನ್ನು ರಕ್ಷಿಸಿ, ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ವೈದ್ಯರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ತೀವ್ರ ಗಾಯಗಳಿಂದಾಗಿ ಯುವತಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸದ್ಯ ಈ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
PublicNext
06/05/2026 09:51 am
LOADING...