ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಂಗಾಪುರ ಸಿಂಗಾರಕ್ಕೆ ಮಾಜಿ ಕಾರ್ಪೊರೇಟರ್ ಮತ್ತೆ ಬರಬೇಕು?

ಸಿಂಗಾಪುರ. ಹೆಸರು ಕೇಳಿದರೆನೇ ಸಾಕು ಏನೋ ಒಂಥರ ಸಂಚಲನ ಉಂಟಾಗುವಂತಿದೆ! ನಮ್ಮ ರಾಜಕಾರಣಿಗಳ ಬಾಯಲ್ಲಿ ಆಗಾಗ ಕೇಳಿ ಬರುತ್ತಿರೋ ಪದವು ಕೂಡ ಸಿಂಗಾಪುರ! ಆದರೆ, ಇದು ಆ ಸಿಂಗಾಪುರ ಅಲ್ಲ. ಬದಲಾಗಿ ಇದು ನಮ್ಮ ಬೆಂಗಳೂರಿನಲ್ಲಿರೋ ಸಿಂಗಾಪುರ. ಬೆಂಗಳೂರು ನಿರ್ಮಾತೃವೆನ್ನಿಸಿದ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಈ ಸ್ಥಳದಲ್ಲಿ ವಾಸವಾಗಿದ್ದ

'ಸಿಂಗಪ್ಪ ನಾಯಕ' ಎಂಬ ಜನ ನಾಯಕನ ಹೆಸರಿನಿಂದಾಗಿ ಇದಕ್ಕೆ ಸಿಂಗಾಪುರ ವಾರ್ಡ್ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತೆ. 1524 ರಲ್ಲಿ ನಿರ್ಮಿಸಲಾಯಿತೆಂದು ಹೇಳಲಾಗುವ ಪುರಾತನ ವರದರಾಯಸ್ವಾಮಿ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಜಿಬಿಎ ಆದ ಬಳಿಕ ವಾರ್ಡ್ ನಲ್ಲಿ ಹೇಳಿಕೊಳ್ಳುವಂಥ ಕಾಮಗಾರಿಗಳು ನಡೆದಿಲ್ಲವೆಂದೇ ಹೇಳಬೇಕು. ಆದರೆ ಈಗ್ಗೆ ಹತ್ತು ವರ್ಷಗಳ ಹಿಂದೆ ಈ ವಾರ್ಡ್ ನ ಕಾರ್ಪೊರೇಟರ್ ಆಗಿದ್ದ ಯಶೋಧಮ್ಮ ಕೃಷ್ಣಪ್ಪ ಅವರ ಕೆಲಸ-ಕಾರ್ಯಗಳನ್ನು ನೆನೆಸಿಕೊಳ್ಳುವ ನಿವಾಸಿಗಳು, ಯಶೋಧಮ್ಮ ಕೃಷ್ಣಪ್ಪನಂಥ ಕಾರ್ಪೊರೇಟರ್ ಗಳು ಮತ್ತೆ ಬರಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಇನ್ನು, ಇಲ್ಲಿರೋ ರಾಜಕಾಲುವೆಗೆ ಕಸಾಯಿಖಾನೆಯ ತ್ಯಾಜ್ಯವನ್ನು ತಂದು ಎಸೆಯುವುದರಿಂದ ಕಾಲುವೆಯ ನೀರು ರಕ್ತದ ವರ್ಣಕ್ಕೆ ತಿರುಗಿ ಗಬ್ಬು ವಾಸನೆ ಹರಡುತ್ತೆ. ಈ ಬಗ್ಗೆ ಅಧಿಕಾರಿಗಳಾರೂ ತಲೆನೇ ಕೆಡಿಸಿಕೊಳ್ಳುತ್ತಿಲ್ಲ ಎಂದು ಸಿಂಗಾಪುರ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ಅಂದಹಾಗೆ, ಸಿಂಗಾಪುರ ವಾರ್ಡ್ ಜಿಬಿಎ ಮೀಸಲಾತಿ ಪಟ್ಟಿಯ ಪ್ರಕಾರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

Edited By : Somashekar
PublicNext

PublicNext

05/05/2026 02:43 pm

Cinque Terre

19.01 K

Cinque Terre

0