ಬೆಳ್ತಂಗಡಿ: ಮನೆಯ ಗೋಡೆಯೊಂದರಲ್ಲಿ ಪತ್ತೆಯಾಗಿರುವ ನಾಗರಹಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ರಕ್ಷಿಸಿ 16 ಮರಿಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.
ನೆರಿಯ ಗ್ರಾಮದ ಗುಂಡಿಕಂಡ ಬೊಮ್ಮಣ್ಣ ಗೌಡ ಎಂಬವರ ಮನೆಯ ಗೋಡೆಯೊಳಗಡೆ ಕಳೆದ ಕೆಲವು ದಿನಗಳ ಹಿಂದೆ ನಾಗರಹಾವು ಕಂಡುಬಂದಿತ್ತು. ಇದನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲು ಸಮಾಜ ಸೇವಕ, ಉರಗ ಮಿತ್ರ ಕಕ್ಕಿಂಜೆಯ ಸ್ನೇಕ್ ಅನಿಲ್ ಅವರಿಗೆ ಮಾಹಿತಿ ನೀಡಲಾಗಿತ್ತು. ಈ ವೇಳೆ ಗೋಡೆಯ ಒಳಗಡೆ ಇದ್ದ ನಾಗರಹಾವನ್ನು ಹಿಡಿದಾಗ ಸುಮಾರು 16 ಮೊಟ್ಟೆಗಳು ಪತ್ತೆಯಾಗಿತ್ತು.
ಈ ಮೊಟ್ಟೆಗಳಿಗೆ ಇರುವೆಗಳು ಮುತ್ತಿಕೊಂಡಿದ್ದು ಅವುಗಳ ಸ್ಥಿತಿ ಅಪಾಯಕಾರಿಯಾಗಿತ್ತು. ಇದನ್ನು ಗಮನಿಸಿ ಅವುಗಳನ್ನು ಗೋಡೆಯಿಂದ ಹೊರ ತೆಗೆದು ಅಗತ್ಯ ಆರೈಕೆ ನೀಡಿ ಕೃತಕ ಕಾವು ನೀಡುವ ಕೆಲಸವನ್ನು ಮಾಡಿದರು. ಇದೀಗ 16 ಮರಿಗಳು ಮೊಟ್ಟೆಯಿಂದ ಹೊರಬಂದಿವೆ. ಆರೋಗ್ಯವಾಗಿದ್ದ ಈ ನಾಗರಹಾವಿನ ಮರಿಗಳನ್ನು ಅರಣ್ಯ ಇಲಾಖೆಯ ಸಹಕಾರದಲ್ಲಿ ಚಾರ್ಮಾಡಿ ಘಾಟಿ ವಿಭಾಗದ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
PublicNext
05/05/2026 03:46 pm
LOADING...