ಗದಗ: ಏಪ್ರಿಲ್ 10 ರಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಬಂಗಾರದ ಆಭರಣ ಕಳ್ಳತನ, ಹಾಗೂ ಏಪ್ರಿಲ್ 25ರಂದು ಬಸ್ ನಿಲ್ದಾಣದಲ್ಲಿ ಹಣ ಕದ್ದ ಆರೋಪದಡಿಯಲ್ಲಿ ಮಹಾರಾಷ್ಟ್ರದ ಪಾಂಗರಮಲ್ ಗ್ರಾಮದ ರಾಜವೀರ ತಂದೆ ರೈಮು ಕಾಳೆ ಎಂಬ ಕಳ್ಳನನ್ನು ಬಂಧಿಸುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದು ಆರೋಪಿ ಕಳ್ಳನ ಕಡೆಯಿಂದ ಒಟ್ಟು 16 ಗ್ರಾಂ ಬಂಗಾರದ ಆಭರಣ, 2,20,000 ಲಕ್ಷ ಮೌಲ್ಯದ ಆಭರಣಗಳು ಹಾಗೂ 6100ರೂಪಾಯಿ ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಿಸಿದ ಒಂದು ಮೋಟಾರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ,
ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ, ಡಿ ಎಸ್ ಪಿ ಉಪ ವಿಭಾಗ ಗದಗ ಇವರ ಮಾರ್ಗದರ್ಶನದಲ್ಲಿ ಶಿರಹಟ್ಟಿ ಸಿಪಿಐ ಬಿ ವಿ ನ್ಯಾಮಗೌಡ, ಪಿ ಎಸ್ ಐ ನಾಗರಾಜ ಗಡದ, ಅಪರಾಧ ವಿಭಾಗದ ಪಿ ಎಸ್ ಐ ಟಿ ಕೆ ರಾಠೋಡ ಇವರನ್ನೊಳಗೊಂಡ ತಂಡ ರಚಿಸಿ ಪತ್ತೆ ಕಾರ್ಯ ಕೈ ಗೊಂಡಿದ್ದರು
ಆರೋಪಿ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪ್ರೊಬೆಷನರಿ ಪಿಎಸ್‌ಐ ಪೂಜಾ ಪಾರ್ಥನಳ್ಳಿ, ಆನಂದಸಿಂಗ್ ದೊಡ್ಡಮನಿ, ಸಿಬ್ಬಂದಿಗಳಾದ ಡಿ ಎಸ್ ನದಾಫ, ಪಿ ಡಿ ಮ್ಯಾಗೇರಿ, ಎಚ್ ಐ ಕಲ್ಲಣ್ಣವರ, ಆರ್ ಎಸ್ ಯರಗಟ್ಟಿ, ಎಂ ಎ ಶೇಖ್, ಎಂ.ಎಸ್ ಬಳ್ಳಾರಿ, ಆನಂದ ಕಮ್ಮಾರ, ಸಿ.ಎಸ್ ಮಠಪತಿ, ಎ.ಎಲ್ ಕರ್ಜಗಿ, ಮಧುಚಂದ್ರ ಧಾರವಾಡ, ಮಾರ್ತಾಂಡಪ್ಪ ಉಪ್ಪಾರ, ಎಸ್.ಡಿ ಭೂತಪ್ಪನವರ, ಹಾಗೂ ಗುರು ಬೂದಿಹಾಳ, ಸಂಜು ಕೊರಡೂರ ಅಪ್ಪಣ್ಣ ರಾಠೋಡ, ಇವರುಗಳ ಕಾರ್ಯಕ್ಕೆ ಎಸ್‌ಪಿ ರೋಹನ್ ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
05/05/2026 04:51 pm
LOADING...