ವಿಜಯಪುರ: ಚಿನ್ನದ ಅಂಗಡಿಯಲ್ಲಿ ಗ್ಯಾಸ್ ಸಿಲೆಂಡರ್ ಬ್ಲಾಸ್ಟ್ ಆಗಿ ಬಂಗಾಳ ಮೂಲದ ಇಬ್ಬರು ಅಕ್ಕಸಾಲಿಗರಿಗೆ ಸುಟ್ಟಗಾಯಗಳಾಗಿರುವ ಘಟನೆ ವಿಜಯಪುರ ನಗರದ ಸರಾಫ್ ಬಜಾರ್ ನಲ್ಲಿ ಸಂಭವಿಸಿದೆ.
ಇನ್ನು ಘಟನೆಯಲ್ಲಿ ಗಾಯಗೊಂಡ ಬೀಜು (38), ನಾನಾ ಹಕ್ಕಿಂ (40) ಇಬ್ಬರನ್ನು ಆಟೋ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಿಗ್ಗೆ ಅಕ್ಕಸಾಲಿಗ ಕೆಲಸಕ್ಕೆ ಬಂದಿದ್ದ ಚಿನ್ನದ ಅಂಗಡಿ ಸಿಬ್ಬಂದಿಗಳು ಚಿನ್ನದ ಕುಲುಮೆ ಕೆಲಸ ಆರಂಭಿಸುತ್ತಿದ್ದಂತೆ ಗ್ಯಾಸ್ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಚಿನ್ನದಂಗಡಿ ಶೆಟರ್ ಬಾಗಿಲು ಒಡೆದು ಹೋಗಿವೆ. ಅಲ್ಲದೆ ಪಕ್ಕದ ಗಿಫ್ಟ್ ಸೆಂಟರ್‌ನಲ್ಲಿಯೂ ಹಾನಿ ಉಂಟಾಗಿದೆ ಸ್ಫೋಟದ ತೀವ್ರತೆ ಗೆ ಗಿಫ್ಟ್ ಐಟೆಮ್ಸ್. ಕೆಳಗುರುಳಿ ಹಾನಿಯಾಗಿವೆ. ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇನ್ನು ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
14/05/2026 04:43 pm
LOADING...