ಕೊಡಗು: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆ ದುರ್ಮರಣಕ್ಕೀಡಾಗಿದ್ದಾರೆ.
ಚೆನ್ನೈ ಮೂಲದ 33 ವರ್ಷದ ಜ್ಯುನೇಶ್ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ದುಬಾರೆ ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಂಜನ್ ಎಂಬ ಆನೆಯು ಮಾರ್ತಾಂಡ ಎಂಬ ಮತ್ತೊಂದು ಆನೆಗೆ ತಿವಿದಿದ್ದು, ಇದರಿಂದ ಆನೆಗಳ ನಡುವೆ ಕಾದಾಟ ಪ್ರಾರಂಭವಾಗಿದೆ. ಆನೆಗಳು ಕಾದಾಡುತ್ತಿದ್ದ ಸಂದರ್ಭದಲ್ಲಿ ಒಂದು ಆನೆಯು ಪ್ರವಾಸಿ ಮಹಿಳೆ ಜ್ಯುನೇಶ್ ಅವರ ಮೇಲೆ ಆಕಸ್ಮಿಕವಾಗಿ ಬಿದ್ದಿದೆ. ಆನೆಯ ಕೆಳಗೆ ಸಿಲುಕಿದ ಜ್ಯುನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
PublicNext
18/05/2026 04:16 pm
LOADING...