ಅಥಣಿ ತಾಲೂಕಿನ ಅರಟಾಳ ಗ್ರಾಮ…
ಒಂದು ಹರಿದು ಹೋಗಿದ್ದ ಗುಡಿಸಲು…
ಅದರೊಳಗೆ ಭಯ ಮತ್ತು ಅನಿಶ್ಚಿತತೆಯ ಬದುಕು ನಡೆಸುತ್ತಿದ್ದ 78 ವರ್ಷದ ಲಕ್ಷೀಬಾಯಿ ಅಜ್ಜಿ…
ಗಂಡನನ್ನು ಕಳೆದುಕೊಂಡ ನಂತರ, ಮಕ್ಕಳಿಲ್ಲ…
ಆರ್ಥಿಕ ಭದ್ರತೆಯಿಲ್ಲ…
ಮಳೆ ಬಂದರೆ ನೀರು ಸೋರಿಕೆ…
ಗಾಳಿ ಬೀಸಿದರೆ ಗುಡಿಸಲು ಕುಸಿಯುವ ಭಯ…
ಆದರೆ ಈಗ…
ಅವರ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ವಾತ್ಸಲ್ಯ” ಯೋಜನೆ, ಲಕ್ಷೀಬಾಯಿ ಅಜ್ಜಿಗೆ ಹೊಸ ಆಶ್ರಯ ನೀಡಿದೆ.
ಇಂದು ಅಜ್ಜಿಗೆ ಸುರಕ್ಷಿತ, ಸುಸಜ್ಜಿತ ಮನೆ ದೊರೆತಿದೆ.
ಇನ್ನು ಮಳೆ-ಗಾಳಿಯ ಭಯವಿಲ್ಲ…
ನಿಶ್ಚಿಂತೆಯ ಜೀವನಕ್ಕೆ ಹೊಸ ಆರಂಭವಾಗಿದೆ.
ಅಷ್ಟೇ ಅಲ್ಲ…
ಪ್ರತಿ ತಿಂಗಳು ಸಾವಿರ ರೂಪಾಯಿ ಗೌರವಧನವೂ ದೊರೆಯುತ್ತಿದೆ.
ಇದು ಅವರ ದಿನನಿತ್ಯದ ಬದುಕಿಗೆ ಬೆಂಬಲವಾಗಿದೆ.
“ಇಷ್ಟು ದಿನ ಭಯದಲ್ಲಿ ಬದುಕಿದ್ದೆ… ಈಗ ನನಗೆ ಸೂರು ಸಿಕ್ಕಿದೆ…”
ಎಂದು ಸಂತಸದ ಕಣ್ಣೀರಿನಲ್ಲಿ ಹೇಳುತ್ತಾರೆ ಲಕ್ಷೀಬಾಯಿ ಅಜ್ಜಿ.
ಮಾನವೀಯತೆಗೆ ಮತ್ತೊಂದು ಹೆಸರು… “ವಾತ್ಸಲ್ಯ”
ನಿರಾಶ್ರಿತರ ಬದುಕಿಗೆ ಆಶ್ರಯ ಮತ್ತು ಭರವಸೆ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಒಟ್ಟಾರೆ…
“ವಾತ್ಸಲ್ಯ” ಕೇವಲ ಮನೆ ಕಟ್ಟಿಕೊಡುವ ಯೋಜನೆ ಅಲ್ಲ…
ಅದು ಒಂದು ಜೀವಕ್ಕೆ ಹೊಸ ಬದುಕಿನ ಬೆಳಕು.
PublicNext
21/05/2026 11:11 am
LOADING...