ಬೆಳಗಾವಿ: ಹೆತ್ತ ತಾಯಿಯನ್ನೇ ನಡುರಾತ್ರಿ ಬೀದಿಗೆ ಎಸೆದು ಪುತ್ರ ಪರಾರಿ ಆಗಿದ್ದಾನೆ ಎನ್ನಲಾಗಿದ್ದು, ತಾಯಿ ಕಣ್ಣೀರು ಹಾಕುತ್ತಿದ್ದು, ಪುತ್ರನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ಅನಾರೋಗ್ಯ ಪೀಡಿತ ತಾಯಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಕಮಲಮ್ಮ ಕಟ್ಟಿ ವೃದ್ಧೆಯನ್ನ ಗುಡ್ಡಗಾಡು ಪ್ರದೇಶದಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಪಾಪಿ ಪುತ್ರ ಸಂತೋಷ ಕಟ್ಟಿ ಎಂಬಾತ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
ತನ್ನ ಮಗ ಸಂಕೇಶ್ವರ ಡಿಪೋದಲ್ಲಿ ಕೆಎಸ್ ಆರ್ ಟಿಸಿ ನೌಕರನಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ತಾಯಿ ಕಮಲಮ್ಮ ಮಾಹಿತಿ ನೀಡಿದ್ದಾಳೆ. ಗುಡ್ಡಗಾಡು ಪ್ರದೇಶದಲ್ಲಿಯೇ ತಾಯಿಯನ್ನು ಬಿಟ್ಟು ಮಾನವೀಯತೆ ಮರೆತ ಪುತ್ರನ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರಿಂದ ಆಗ್ರಹಿಸಲಾಗಿದೆ. ಮುನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
02/06/2026 07:55 pm
LOADING...