ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: "ಮೋದಿ ಚಾಕೊಲೇಟ್ ಕೊಟ್ಟಿದ್ದಾರೆ ಅದರಲ್ಲಿ ತಪ್ಪೇನಿದೆ! - ಯತ್ನಾಳ್

ವಿಜಯಪುರ: ರಾಹುಲ್ ಗಾಂಧಿ ಒಬ್ಬ ಜೋಕರ್, ತಲೆ ಇಲ್ಲ, ಹೇಗೆ ಡಿಗ್ನಿಫೈ ಆಗಿರಬೇಕು ಎಂದು ಗೊತ್ತಿಲ್ಲ" ಎಂದು ಯತ್ನಾಳ್ ಹರಿಹಾಯ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಚಾಕೊಲೇಟ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಅವರು ಪಾರ್ಲೆ ಕಂಪನಿಯ ಚಾಕೊಲೇಟ್ ಕೊಟ್ಟಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಯತ್ನಾಳ್, ರಾಹುಲ್ ಗಾಂಧಿ ಅವರ ಹೇಳಿಕೆ ಹಾಸ್ಯಾಸ್ಪದ ಎಂದರು.

ನೆಹರೂ ಅವರು ಲಾರ್ಡ್ ಮೌಂಟ್‌ಬ್ಯಾಟನ್ ಮನೆಯಲ್ಲಿ ರಾತ್ರಿ ಮಲಗಿದ್ದರು. ಅಲ್ಲದೆ, ರಾಜೀವ್ ಗಾಂಧಿ ದೇಶದ್ರೋಹಿಗಳನ್ನ ಯುದ್ಧದ ಹಡಗಿನಲ್ಲಿ ಎಲ್ಲಿಗೋ ಕರೆದೊಯ್ದು ಪಾರ್ಟಿ ಮಾಡಿದ್ದರು ಎಂದು ದೂರಿದರು.

ಲಾರ್ಡ್ ಮೌಂಟ್‌ಬ್ಯಾಟನ್ ಅವರ ಮಗಳು ಬರೆದಿರುವ ಪುಸ್ತಕದಲ್ಲಿ, ಗಾಂಧಿ ಹತ್ಯೆಯಾದಾಗ ನೆಹರೂ ನನ್ನ ತಾಯಿಯ ಜೊತೆ ನನ್ನ ಮನೆಯಲ್ಲಿದ್ದರು ಎಂದು ಉಲ್ಲೇಖಿಸಿದ್ದಾಳೆ. ಇಂತಹ ದೇಶದ್ರೋಹದ ಕೆಲಸ ಮಾಡಿದ ಕುಟುಂಬ ರಾಹುಲ್ ಗಾಂಧಿ ಅವರದ್ದು ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

Edited By : Shivu K
PublicNext

PublicNext

22/05/2026 06:18 pm

Cinque Terre

5.31 K

Cinque Terre

0