ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಕಾಕ್ರೋಚ್ ಜನತಾ ಪಾರ್ಟಿ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಏನಂದ್ರು ಗೊತ್ತಾ ?

ವಿಜಯಪುರ: ಸಾಫ್ಟ್‌ವೇರ್‌ನಲ್ಲಿ ಏನೂ ಬೇಕಾದರೂ ಫಾಲೋವರ್ಸ್ ಮಾಡ್ಕೋಬಹುದು. ನೀವು ಸಾಫ್ಟ್‌ವೇರ್‌ ನಾಗ ಏನು ಬೇಕಾದರೂ ಫಾಲೋವರ್ಸ್ ಮಾಡ್ಕೋಬಹುದಲ್ಲ. ನಿಮ್ಮ ಕೈಗೇ ಇರ್ತತಿ, ನೀವೇ ಮಾಡ್ಕೋಬಹುದು. ​ಭಾರತವನ್ನ ಅತಂತ್ರ ಮಾಡೋದು ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾಕ್ರೋಚ್ ಪಾರ್ಟಿ ಏನೈತಲ್ಲ... ವ್ಯವಸ್ಥಿತವಾಗಿ ಭಾರತವನ್ನ ಅತಂತ್ರ ಮಾಡುವುದು. ಪ್ರಧಾನ ಮಂತ್ರಿಗಳನ್ನ ಇಳಿಸಬೇಕು ಅನ್ನೋದು ಅವರ ಉದ್ದೇಶ. ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರ ಆಗಲಕತ್ತದಲ್ಲ, ಇವರಿಗೆ ತಡ್ಕೊಳ್ಳೋಕೆ ಆಗಲಕತ್ತಿಲ್ಲ. ​ನೇರವಾಗಿ ಇವತ್ತು ರಾಹುಲ್ ಗಾಂಧಿ ಚೀನಾದ ಏಜೆಂಟ್ ಎಲ್ಲಾ ಗುಪ್ತ ಕೆಲವೊಂದು ವಿಚಾರಗಳನ್ನ ಹೇಳ್ಯಾನ, ಪಾಕಿಸ್ತಾನ್ ಪರವಾಗಿ ಮಾತಾಡ್ತಾನ. ​ಕಾಂಗ್ರೆಸ್ ಒಂದು ದೇಶದ್ರೋಹಿ ಪಾರ್ಟಿ. ಕಾಂಗ್ರೆಸ್ಸೇ ಒಂದು ದೇಶದ್ರೋಹಿ ಪಾರ್ಟಿ ಆಗೇತಿ ಇವತ್ತು. ಕಮ್ಯುನಿಸ್ಟ್ ವಿಚಾರದವರು, ಈ ಲೆಫ್ಟಿಸ್ಟ್ ದೇಶದ ಬೆಳವಣಿಗೆ ನೋಡೋಕೆ ಸಹನೆ ಆಗಲಾರದಂತ ಟೀಮ್ ಕೂಡ್ಕೊಂಡು ಮಾಡ್ತಾ ಇದ್ದಾರೆ ಎಂದರು.

Edited By :
PublicNext

PublicNext

22/05/2026 06:19 pm

Cinque Terre

5.6 K

Cinque Terre

0