ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ವಿಜಯೇಂದ್ರಗೆ ಸರ್ಕಾರದ ವಿರುದ್ಧ ಧ್ವನಿ ಎತ್ತುವ ನೈತಿಕತೆ ಇಲ್ಲ; ಯತ್ನಾಳ್ ವಾಗ್ದಾಳಿ

ವಿಜಯಪುರ: ಬಿಜೆಪಿಯಲ್ಲಿ ನಾಯಕತ್ವದ ದೊಡ್ಡ ಕೊರತೆ ಇದೆ. ವಿಜಯೇಂದ್ರಗೆ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತುವ ನೈತಿಕತೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕಿಡಿ ಕಾರಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಮೇಲೆ 108 ಭ್ರಷ್ಟಾಚಾರದ ಆರೋಪಗಳಿವೆ. ಅವರ ತಂದೆಯವರ ಡೂಪ್ಲಿಕೇಟ್ ಸಹಿ ಮಾಡಿದ ಆರೋಪಗಳು ಸಹ ಇವೆ. ವಿಜಯೇಂದ್ರ ಅವರ ತಂದೆಯ ಮೇಲೆ ಪೊಕ್ಸೋ ಕೇಸ್ ಇದೆ, ವಿಜಯೇಂದ್ರ ಅವರಿಗೆ ನೈತಿಕತೆಯಲ್ಲ.

ಬಿಜೆಪಿಯವರಿಗೆ 4 ಸ್ವಾಮೀಜಿಗಳು ಇದ್ದಾರೆ. ಯಡಿಯೂರಪ್ಪ ಹೇಳಿದಾಗ ತಲೆಯ ಮೇಲೆ ಅವರು ಕೈ ಇಡುತ್ತಾರೆ. ಹೈಕಮಾಂಡ್ ಗೆ ಫೋನ್ ಮಾಡಿಸುತ್ತಾರೆ.

ವಿಜಯೇಂದ್ರನನ್ನು ಕೈ ಬಿಟ್ಟರೆ ಲಿಂಗಾಯತರು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸುತ್ತಾರೆ. ಸ್ವಾಮೀಜಿಗಳ ಮಾತು ಕೇಳಿ ಯಾರಾದರೂ ರಾಜಕೀಯ ಮಾಡುತ್ತಾರಾ?

ಬಿಜೆಪಿಗೆ ಯಾರೋ ಇಬ್ಬರು ವೀಕ್ಷಕರು ಬಂದಿದ್ದಾರೆ, ಅವರು ಪ್ರಾಮಾಣಿಕರಿದ್ದಾರೆ. ಅವರನ್ನು ಬುಕ್ ಮಾಡಿಕೊಳ್ಳುವುದಕ್ಕೆ ಆಗಲ್ಲ, ಅವರು ಪ್ರಾಮಾಣಿಕವಾಗಿ ವರದಿ ಕೊಟ್ರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯುತ್ತೆ. ಇಲ್ಲಾ ಇದೇ ಭ್ರಷ್ಟ ಕುಟುಂಬವನ್ನು ಮುಂದುವರೆಸಿದರೆ ಬಿಜೆಪಿಗೆ ಕಷ್ಟ.

ಮೋದಿ ಅವರು ಹಗಲು- ರಾತ್ರಿ ದುಡಿಯುತ್ತಾರೆ. ಆದರೆ, ರಾಜ್ಯದಲ್ಲಿ ಕಳ್ಳರ ಕೈಗೆ ಪಕ್ಷವನ್ನು ಕೊಟ್ಟಿದ್ದಾರೆ ಏನು ಮಾಡೋದು? ಎಂದರು.

Edited By :
PublicNext

PublicNext

22/05/2026 06:26 pm

Cinque Terre

9.29 K

Cinque Terre

0