ವಿಜಯಪುರ:- ರಾಜ್ಯ ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ ಎಂದಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಿರುದ್ಧ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್ ಎಂ ಪಾಟೀಲ್ ಗಣಿಹಾರ, ರಮೇಶ ಜಿಗಜಿಣಗಿ ಅವರ ಸರ್ಕಾರ ಏನು ಸಾಧನೆ ಮಾಡಿದೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ನೀಡಿದೆ. ನಿಮ್ಮ ಸರ್ಕಾರ ಏನೂ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರಂಟಿ ಮೂಲಕ ಅನೇಕರ ಬದುಕು ಬೆಳಗಿದೆ. ನಿಮ್ಮ ಸರ್ಕಾರ ಆಡಳಿತಾವಧಿಯಲ್ಲಿ ಮಾಡಿರೋ ಪ್ರಗತಿ ಪರ ಕೆಲಸವೇನು ಅಂತ ಕುಟುಕಿದ್ದಾರೆ.
PublicNext
24/05/2026 04:29 pm
LOADING...