ಹುಬ್ಬಳ್ಳಿ: ಒಂದಿಲ್ಲೊಂದು ಜನಪರ ಕಾರ್ಯ, ನೊಂದವರ ಧ್ವನಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರಮಜೀವಿ ಸಾಧಕರು ರಿಲೈಯಬಲ್ ಫೌಂಡೇಶನ್ ಸಂಸ್ಥಾಪಕರಾದ ಸಿದ್ಧರಾಜ್ ಎಂ.ಎಸ್. ಅವರು ಬಡಮಕ್ಕಳ ಓದಿಗೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಶೈಕ್ಷಣಿಕ ಜೀವನಕ್ಕೆ ಹೊಸ ಅರ್ಥವನ್ನು ಕಲ್ಪಿಸುವ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.
ರಿಲೈಯಬಲ್ ಫೌಂಡೇಶನ್ ಹೆಸರಿನಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿರುವ ಸಿದ್ಧರಾಜ್ ಎಂ.ಎಸ್. ಅವರು, ವಿಶ್ವ ಹಿಂದೂ ಪರಿಷತ್ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿ ಕಿಟ್ ವಿತರಣೆ ಮೂಲಕ ಮಹತ್ವದ ಕಾರ್ಯವನ್ನು ಮಾಡಿದ್ದಾರೆ.
ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಸಾಗರ ಕಾಲೋನಿಯ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾದ್ದ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳಿಗೆ ಶಿಕ್ಷಣ ಸಾಮಗ್ರಿ ಕಿಟ್ ವಿತರಣೆ ಮಾಡಿದರು. ಇಂತಹದೊಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಶ್ರೀರಮಾನಂದ ಭಾರತಿ ಸ್ವಾಮೀಜಿ, ವಿ.ಎಚ್.ಪಿ.ಯ ಚೇತನ ರಾವ್, ಮಹಾಂತೇಶ ಟೆಂಗಿನಕಾಯಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಎರಡು ತಿಂಗಳ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಉಚಿತ ಟ್ಯೂಷನ್ ನೀಡುವ ಜೊತೆಗೆ ಕಲಿಕಾ ಸಾಮಗ್ರಿಗಳ ಕಿಟ್ ವಿತರಣೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ. ಇಂತಹ ಸಮಾಜಮುಖಿ ಸೇವಾ ಕಾರ್ಯವನ್ನು ಮಾಡಿದ ಸಿದ್ಧರಾಜು ಎಂ.ಎಸ್. ಅವರಿಗೆ ದೇವಸ್ಥಾನದ ವತಿಯಿಂದ ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಇದೇ ವೇಳೆ ಆಗಮಿಸಿದ ಅತಿಥಿಗಳನ್ನೂ ಗೌರವಿಸಲಾಯಿತು. ಇಂತಹ ಜನಪರ ಕಾರ್ಯದ ಬಗ್ಗೆ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ರಿಲೈಯಬಲ್ ಫೌಂಡೇಶನ್ ಹೆಸರಲ್ಲಿ ಸಿದ್ಧರಾಜ್ ಎಂ.ಎಸ್. ಅವರು ಮಹತ್ವದ ಕಾರ್ಯವನ್ನು ಮಾಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಬಡಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿರುವ ಇವರ ಕಾರ್ಯ ಇನ್ನೂ ಹೆಚ್ಚು ಹೆಚ್ಚು ವ್ಯಾಪಿಸಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/05/2026 10:40 pm