ಹುಬ್ಬಳ್ಳಿ: ಜನ್ಮದಿನ ಅಂದರೇ ಕೇಕ್ ಕತ್ತರಿಸಿ, ಸಿಹಿ ಹಂಚಿ, ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಜೊತೆಗೆ ಪಾರ್ಟಿ ಮಾಡುವುದು ಸಾಮಾನ್ಯ. ಆದರೆ ಜನ್ಮದಿನದ ಆಚರಣೆ ಸಮಾಜಕ್ಕೆ ಕೊಡುಗೆಯಾಗಬೇಕೆಂದು ಎಸ್.ಎಂ.ಶಿವಯೋಗಿಮಠ ಅವರು ವಿನೂತನ ಕಾರ್ಯದ ಮೂಲಕ ಜನರಿಗೆ ಮಾದರಿಯಾಗಿದ್ದಾರೆ. ಅದೂ ಕೂಡ ವಿಶಿಷ್ಟ ಆಚರಣೆಯ ಜೊತೆಗೆ ಜನಮಾನಸದಲ್ಲಿ ನೆಲೆಯಾಗುವಂತೆ ಮಾಡಿದ್ದಾರೆ.
ಎಲ್ಲೆಡೆಯೂ ರಕ್ತದ ಅಭಾವ. ರಕ್ತದ ಕೊರತೆಯಿಂದ ಬಹುತೇಕ ಶಸ್ತ್ರಚಿಕಿತ್ಸೆಗಳು ಮುಂದೂಡುತ್ತಿವೆ. ಅಲ್ಲದೇ ಅದೆಷ್ಟೋ ರಕ್ತದಾನಿಗಳು ತಾಪಮಾನದ ಸಮಸ್ಯೆಯಿಂದ ಹಿಂದೇಟು ಹಾಕುತ್ತಿದ್ದಾರೆ. ಇದೆಲ್ಲವನ್ನೂ ಮನವರಿಕೆ ಮಾಡಿಕೊಂಡ ಎಸ್.ಎಂ.ಶಿವಯೋಗಿಮಠ ಅವರು ತಮ್ಮ ಜನ್ಮದಿನವನ್ನು ವಿನೂತನ ಆಚರಣೆ ಮಾಡಿದ್ದಾರೆ. ಹೌದು.. ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ಬಹುದೊಡ್ಡ ಹೆಸರು ಮಾಡಿ ಶಿಕ್ಷಣ ಸೇವೆಯಲ್ಲಿ ತೊಡಗಿಕೊಂಡಿರುವ ಸಾಧಕರು ಎಸ್.ಎಂ.ಶಿವಯೋಗಿಮಠ. ತಮ್ಮ ಜನ್ಮದಿನದ ಅಂಗವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಇಂಪಲ್ಸ್ ಪಿಯು ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಜನ್ಮದಿನ ಆಚರಣೆ ಮಾಡಿದ್ದು, ವಿಶೇಷವಾಗಿದೆ. ರಾಷ್ಟ್ರೋತ್ಥಾನ ರಕ್ತ ಭಂಡಾರದ ಸಹಭಾಗಿತ್ವದಲ್ಲಿ ಇಂತಹದೊಂದು ಅವಿಸ್ಮರಣೀಯ ಕಾರ್ಯ ನಡೆದಿದೆ.
ಇನ್ನೂ ಎಸ್.ಎಂ.ಶಿವಯೋಗಿಮಠ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಿದ ಹಿನ್ನೆಲೆಯಲ್ಲಿ ಹಲವಾರು ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಗಣ್ಯ ಉದ್ಯಮಿದಾರರು, ಸಮಾಜ ಸೇವಕರು ಹಾಗೂ ಇಂಪಲ್ಸ್ ಪಿಯು ಕಾಲೇಜಿನ ಚೇರಮನ್‌ರಾದ ಶಿವಲಿಂಗಯ್ಯ ಶಿವಯೋಗಿಮಠರ ಜನ್ಮದಿನದ ಪ್ರಯುಕ್ತವಾಗಿ ಶಿರಹಟ್ಟಿ ಮಠದ ಜಗದ್ಗುರು ಫಕ್ಕೀರೇಶ್ವರ ಸ್ವಾಮೀಜಿಗಳು ಸನ್ಮಾನಿಸಿ ಆಶೀರ್ವಾದ ಮಾಡುವ ಮೂಲಕ ಮತ್ತಷ್ಟು ಸಮಾಜ ಸೇವೆ ಮಾಡುವಂತೆ ಶುಭ ಹಾರೈಸಿದರು.
ಒಟ್ಟಿನಲ್ಲಿ ಎಸ್.ಎಂ.ಶಿವಯೋಗಿಮಠ ಅವರು ಒಂದಿಲ್ಲೊಂದು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕಾರ್ಯದ ಜೊತೆಗೆ ಶೈಕ್ಷಣಿಕ ಸೇವೆಯನ್ನು ಮಾಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಸಾಧಕ ಶ್ರಮಜೀವಿಯಾಗಿರುವ ಶಿವಯೋಗಿಮಠ ಅವರಿಗೆ ದೇವರು ಇನ್ನೂ ಹೆಚ್ಚಿನ ಆರೋಗ್ಯ ನೀಡಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/05/2026 09:28 pm