ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕರ್ನಾಟಕ ಸರ್ಕಾರದ "ಉತ್ತಮ ಪಶು ವೈದ್ಯ ಪ್ರಶಸ್ತಿಗೆ" ಹನುಮಂತಗೌಡ್ರು ಭಾಜನ

ಕುಂದಗೋಳ : ರೈತಾಪಿ ಜನರ ಜೀವನಾಡಿ ಜಾನುವಾರುಗಳ ಆರೋಗ್ಯ ಪರಿಶೀಲನೆ, ಸೂಕ್ತ ಚಿಕಿತ್ಸೆ ಹಾಗೂ ಉತ್ತಮ ಸರ್ಕಾರಿ ಸೇವೆಯನ್ನು ಗುರುತಿಸಿ ಇಲ್ಲೊಬ್ಬರಿಗೆ "ಉತ್ತಮ ಪಶು ವೈದ್ಯ" ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಿದೆ.

ಕುಂದಗೋಳ ತಾಲೂಕು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಗೌಡ ಪಾಟೀಲ್ ಎಂಬುವವರೇ ಕರ್ನಾಟಕ ಸರ್ಕಾರ ನೀಡುವ ಬೆಳಗಾವಿ ವಿಭಾಗದ "ಉತ್ತಮ ವೈದ್ಯ" ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ವರ್ಷ 2026 ಏಪ್ರಿಲ್,24 ರಂದು ಪಶು ವೈದ್ಯರ ದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ನಡೆದ ಸಮಾರಂಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಚಿವ ಕೆ.ವೆಂಕಟೇಶ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವೈದ್ಯ ಹನುಮಂತಗೌಡ ಪಾಟೀಲ್ ಅವರಿಗೆ ಪ್ರಶಸ್ತಿ, ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ.

ಕುಂದಗೋಳ ತಾಲೂಕಿನ 20 ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾಲಯಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿ, ಸ್ವತಃ ತಾವು ಮುಖ್ಯ ಆಡಳಿತ ವೈದ್ಯಾಧಿಕಾರಿಯಾದರೂ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ವೈದ್ಯ ಹನುಮಂತಗೌಡ ಪಾಟೀಲ್ ಕುಂದಗೋಳ ರೈತರಿಗೆ "ಗೌಡ್ರು" ಎಂದೇ ಫೇಮಸ್.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/05/2026 08:34 pm

Cinque Terre

26.12 K

Cinque Terre

1

ಸಂಬಂಧಿತ ಸುದ್ದಿ