ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಾಣಾಪಾಯದಲ್ಲಿದ್ದ ತಾಯಿ-ಮಗುವನ್ನು ರಕ್ಷಿಸಿದ ದೇವದೂತರು: ವೈರಲ್ ಆಯಿತು ಸ್ಥಳೀಯರ ಧೈರ್ಯ

ಗ್ರಾಮೀಣ ಭಾಗದ ರಸ್ತೆಯೊಂದರಲ್ಲಿ ಮಗುವನ್ನು ಎತ್ತಿಕೊಂಡು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿದ್ದ ತಾಯಿ, ಆಕೆಯ ಬೆನ್ನಟ್ಟಿದ ಕೈಯಲ್ಲಿ ಕುಡುಗೋಲು ಹಿಡಿದ ಕ್ರೂರಿ ಪತಿ. ಈ ಎದೆ ನಡುಗಿಸುವ ದೃಶ್ಯವೊಂದು ಜನರನ್ನು ಬೆಚ್ಚಿಬೀಳಿಸಿತ್ತು. ಹಠಾತ್ತನೆ ಕೇಳಿಬಂದ ಚೀರಾಟ ಮತ್ತು ಆಕ್ರಂದನದಿಂದ ಏನಾಗುತ್ತಿದೆ ಎಂದು ತಿರುಗಿ ನೋಡಿದ ಜನರಿಗೆ ಈ ಭೀಕರ ಘಟನೆ ಕಣ್ಣೆದುರಾಗಿತ್ತು. ಸಂಪೂರ್ಣ ನಿಯಂತ್ರಣ ಕಳೆದುಕೊಂಡು ಉನ್ಮಾದದಲ್ಲಿದ್ದ ಆತನನ್ನು ಕಂಡು ಇಡೀ ರಸ್ತೆಯಲ್ಲಿದ್ದ ಜನ ಭೀತಿಯಲ್ಲಿದ್ದರು. ಆದರೆ, ಅದೇ ಹೊತ್ತಿಗೆ ಸರಿಯಾಗಿ, ದೇವದೂತರಂತೆ ಆಗಮಿಸಿದ ನೆರೆಹೊರೆಯವರು ಮತ್ತು ಸ್ಥಳೀಯರು ತೋರಿದ ಸಮಯೋಚಿತ ಧೈರ್ಯದ ಕಥೆ ಈಗ ಭಾರಿ ವೈರಲ್ ಆಗುತ್ತಿದೆ. ಸ್ಥಳೀಯರ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ತಾಯಿ ಮತ್ತು ಮಗು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಹೌದು ತನ್ನ ಹೆಂಡತಿ ಮತ್ತು ಮಗುವನ್ನು ಕೊಲ್ಲಲು ರಕ್ತಪಿಪಾಸುವಿನಂತೆ ನುಗ್ಗುತ್ತಿದ್ದ ಆತನನ್ನು ಕಂಡು ಸ್ಥಳೀಯರು ಸುಮ್ಮನೆ ಕೂರಲಿಲ್ಲ. ಸಮಯಪ್ರಜ್ಞೆ ಮೆರೆದ ಕೆಲವರು ತಕ್ಷಣವೇ ಆತನಿಗೆ ಎದುರಾಗಿ ನಿಂತು ಸುತ್ತುವರೆದರು. ಇನ್ನು ಕೆಲವರು ಧೈರ್ಯ ಮಾಡಿ ಆತನ ಕೈಯಲ್ಲಿದ್ದ ಕುಡುಗೋಲನ್ನು ಕಸಿದುಕೊಂಡರು.

ನೆರೆಹೊರೆಯವರ ಈ ಮಿಂಚಿನ ಕಾರ್ಯಾಚರಣೆಯಿಂದಾಗಿ ತಾಯಿ ಮತ್ತು ಮಗು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ನೆರೆಹೊರೆಯವರು ಮತ್ತು ಹಾದಿಹೋಕರು ಕೇವಲ ಮೂಕಪ್ರೇಕ್ಷಕರಾಗಿ ನಿಂತಿದ್ದರೆ, ಅಲ್ಲಿ ದೊಡ್ಡದೊಂದು ಭೀಕರ ರಕ್ತಪಾತವೇ ನಡೆದುಹೋಗುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದಾಗ ಜನರು ಮೊಬೈಲ್‌ನಲ್ಲಿ ವಿಡಿಯೋ ಮಾಡುವುದರಲ್ಲಿ ನಿರತರಾಗುವುದು ಸಾಮಾನ್ಯ. ಆದರೆ, ಈ ಘಟನೆಯಲ್ಲಿ ನೆರೆಹೊರೆಯವರು ತಕ್ಷಣವೇ ಸ್ಪಂದಿಸಿ, ಕ್ರೂರಿ ಪತಿಯನ್ನು ಮಟ್ಟಹಾಕುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಇವರ ಈ ಸಮಯೋಚಿತ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Edited By : Nirmala Aralikatti
PublicNext

PublicNext

25/05/2026 01:08 pm

Cinque Terre

19.22 K

Cinque Terre

0

ಸಂಬಂಧಿತ ಸುದ್ದಿ