ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಕಿಂಗ್ ವಿಡಿಯೋ..! ದಾರಿಹೋಕನ ಮೇಲೆ ಮುಗಿಬಿದ್ದ ಸಾಕುನಾಯಿ, ಕೂದಲೆಳೆ ಅಂತರದಲ್ಲಿ ಪಾರು

ಲಖನೌ: ಸಾಕು ಪ್ರಾಣಿಗಳನ್ನು ಸಾಕುವವರು ಎಷ್ಟು ಜಾಗರೂಕರಾಗಿರಬೇಕು ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಅವುಗಳಿಂದ ಇತರರಿಗೆ ಎಷ್ಟು ಅಪಾಯ ಕಾದಿರುತ್ತದೆ ಎಂಬುದಕ್ಕೆ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಭೀಕರ ಘಟನೆಯೇ ಸಾಕ್ಷಿ. ಉತ್ತರ ಪ್ರದೇಶದ ಷಹಜಹಾನ್‌ಪುರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಸಾಕು ನಾಯಿಯೊಂದು ಅತ್ಯಂತ ಕ್ರೂರವಾಗಿ ದಾಳಿ ಮಾಡಿರುವ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆತಂಕ ಮೂಡಿಸಿದೆ.

ನಾಯಿಯ ಭೀಕರ ಮತ್ತು ಅನಿರೀಕ್ಷಿತ ದಾಳಿಯಿಂದಾಗಿ ಆ ವ್ಯಕ್ತಿ ರಸ್ತೆಯಲ್ಲೇ ನೆಲಕ್ಕೆ ಬೀಳುತ್ತಾರೆ. ಆದರೂ ಬಿಡದ ನಾಯಿ ಅವರ ಕಚ್ಚಿ ಎಳೆಯಲು ಪ್ರಯತ್ನಿಸುತ್ತದೆ. ಈ ವೇಳೆ ಸ್ಥಳದಲ್ಲಿದ್ದವರು ತಕ್ಷಣವೇ ಧಾವಿಸಿ ಬಂದು, ನಾಯಿಯನ್ನು ಹೊಡೆದು ಓಡಿಸಿ ಆ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

Edited By : Nirmala Aralikatti
PublicNext

PublicNext

25/05/2026 03:46 pm

Cinque Terre

28.54 K

Cinque Terre

0

ಸಂಬಂಧಿತ ಸುದ್ದಿ