ಬೆಳಗಾವಿ: 100 ರೂ ಛಾಪಾ ಕಾಗದ ಮೇಲೆ ಖರೀದಿಸಿದ ನಿವೇಶನಗಳಿಗೆ ಮಾನ್ಯತೆ ಕೊಟ್ಟು ಅತ್ಯಾವಶ್ಯಕ ಸೌಲಭ್ಯಗಳನ್ನು ಪೂರೈಸಬೇಕು ಎಂದು ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಉತ್ತರ ಕರ್ನಾಟಕ ಅಂಜುಮನ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸುಮಾರು 10 ರಿಂದ 15 ವರ್ಷಗಳಿಂದ 100 ರೂ. ಛಾಪಾ ಕಾಗದದ ಮೇಲೆ ನಿವೇಶನಗಳನ್ನು ಖರೀದಿಸಿ ಅನೇಕ ಜನರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಇದಲ್ಲದೆ ಕೆಲವು ಖಾಲಿ ಜಾಗ ಸಹ ಇದೆ, ಆದರೆ ಇಲ್ಲಿ ವಿದ್ಯುತ್, ನೀರು, ಚರಂಡಿ ಗಳಂತಹ ಅತ್ಯವಶ್ಯಕ ಸೌಲಭ್ಯಗಳನ್ನು ಪೂರೈಸಲು ಪ್ರತಿಬಂಧ ಹಾಕಿದ್ದರಿಂದ ಜನರಿಗೆ ತೊಂದರೆ ಆಗಿದೆ. ಇದರಿಂದ ಅನೇಕ ಸಮಸ್ಯೆ ಆಗುತ್ತಿದೆ. ಕೂಡಲೇ ಪ್ರತಿಬಂಧವನ್ನು ತೆಗೆದು ಅತ್ಯಾವಶ್ಯಕ ಸೌಲಭ್ಯವನ್ನು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
PublicNext
27/05/2026 10:50 pm
LOADING...