ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಹುಕ್ಕೇರಿ ಕುಟುಂಬಕ್ಕೆ ಸಚಿವ ಸ್ಥಾನ ಕೊಡಿ - ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯ

ಚಿಕ್ಕೋಡಿ: ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಸೇವೆ ಸಲ್ಲಿಸುತ್ತಿರುವ ಎಂಎಲ್ಸಿ ಪ್ರಕಾಶ ಹುಕ್ಕೇರಿ ಅಥವಾ ಶಾಸಕ ಗಣೇಶ ಹುಕ್ಕೇರಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಚಿಕ್ಕೋಡಿ ಪ್ರವಾಸಿ ಮಂದಿರದಿಂದ ಆರಂಭಗೊಂಡ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆಯು ಪ್ರಮುಖ ರಸ್ತೆಗಳ ಮೂಲಕ ಬಸವ ವೃತ್ತದವರೆಗೆ ಸಾಗಿತು. ಬಸವ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ, ಮಾನವ ಸರಪಳಿ ನಿರ್ಮಿಸಿ ತಂದೆ ಅಥವಾ ಮಗನಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ಇದೇ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ರವಿ ಮಿರ್ಜೆ ಮತ್ತು ಅನಿಲ ಪಾಟೀಲ್ ಮಾತನಾಡಿ ಪ್ರಕಾಶ ಹುಕ್ಕೇರಿ ಅವರು ಕಳೆದ 40 ವರ್ಷಗಳಿಂದ ಪಕ್ಷದ ಏಳು-ಬೀಳುಗಳಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕ್ಕೋಡಿ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಹುಕ್ಕೇರಿ ಕುಟುಂಬದ ಶ್ರಮ ಅಪಾರವಾಗಿದೆ. ಹೀಗಾಗಿ ಹಿರಿಯರಾದ ಪ್ರಕಾಶ ಹುಕ್ಕೇರಿ ಅಥವಾ ಯುವ ನಾಯಕ ಗಣೇಶ ಹುಕ್ಕೇರಿ ಅವರಿಗೆ ತಕ್ಷಣವೇ ಸಚಿವ ಸ್ಥಾನ ನೀಡಬೇಕು" ಎಂದು ಹಿರಿಯ ನಾಯಕರನ್ನು ಆಗ್ರಹಿಸಿದರು.

ಸ್ಥಳೀಯ ನಾಯಕರ ಸಮ್ಮುಖದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಪಾಟೀಲ್ ಹಾಗೂ ಅನಿಲ ಪಾಟೀಲ್ ಅವರ ಮುಖಾಂತರ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ (AICC) ತಮ್ಮ ನ್ಯಾಯಯುತ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಣಜೀತ ಶಿರಶೆಟ್, ಅಶ್ವತ ಶಿತೋಳೆ,ಮಲ್ಲಿಕಾರ್ಜುನ ಪಾಟೀಲ್,ಕಿರಣ ಮಾಳಿ,ಸುನೀಲ ಸಪ್ತಸಾಗರೆ, ರವಿ ಖೋತ,ಉಮೇಶ ಮಠಪತಿ, ಅನೀಲ ಮಾನೆ, ನರೇಂದ್ರ ನೇರ್ಲಿಕರ,ಸಾಬೀರ ಜಮಾದಾರ, ಗುಲಾಬಹುಸೇನ ಬಾಗವಾನ, ಈರಫಾನ ಬೇಪಾರಿ, ರಮೇಶ ಪಾಟೀಲ್, ಗಣೇಶ ಮೋಹಿತೆ, ರಾಕೇಶ ಚಿಂಚಣೆ, ರವಿ‌ ಮಾಳಿ,ಬಾಬು ಸಮತಶೆಟ್ಟಿ, ಪ್ರಭಾಕರ ಕೋರೆ, ಶಿವಾನಂದ ಕರೋಶಿ, ಸಂಜು ಪಾಟೀಲ್, ಮಹೇಶ ಕಾಗವಾಡೆ,ಅಂಕುಶ ಖೋತ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By :
PublicNext

PublicNext

01/06/2026 04:02 pm

Cinque Terre

8.2 K

Cinque Terre

0

ಸಂಬಂಧಿತ ಸುದ್ದಿ