ಚಳ್ಳಕೆರೆ: ರಾಜ್ಯದಲ್ಲಿ ಸಿಎಂ ಬದಲಾವಣೆ ಬೆನ್ನಲ್ಲೇ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನಗೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.
ನಮ್ಮ ಪಕ್ಷ ನನ್ನನ್ನೂ ಪರಿಗಣಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾನೂ ಸಚಿವ ಸ್ಥಾನದ ರೇಸ್ ನ ಲ್ಲಿದ್ದೀನಿ ಎಂದು ಹೇಳುವ ಮೂಲಕ ನಾಯಕರ ಭೇಟಿಗೆ ಬೆಂಗಳೂರಿಗೆ ತೆರಳಿದ್ದಾರೆ. ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿರುವ ಅವರು,
ಈ ಕುರಿತು ಈಗಿನ ಸಿಎಂ, ಹೈ ಕಮಾಂಡ್ ನಿರ್ಧಾರ ಮಾಡ್ತಾರೆ.
ಮಾಧ್ಯಮಗಳನ್ನು ನೋಡಿ ನಾವು ಸಾಕಷ್ಟು ತಿಳಿದುಕೊಂಡಿದ್ದೀವಿ,
ಸಿಎಂ ಬದಲಾವಣೆ ವಿಚಾರದ ಕುರಿತು ನಾನು ಹೇಳೋದು ಬೇಕಿಲ್ಲ ಎಂದರು.
PublicNext
28/05/2026 05:26 pm
LOADING...