ಚಿತ್ರದುರ್ಗ: ಕೋಟಿ ವೃಕ್ಷ ಅಭಿಯಾನದ ಹೆಸರಲ್ಲಿ ನೂರಾರು ಎಕರೆ ಅರಣ್ಯ ನಾಶ ಮಾಡಿರುವ ಆರೋಪ ಕೇಳಿ ಬಂದಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಭೂಮಿಯಲ್ಲಿ ಮರಗಳ ನಾಶ ಮಾಡಿದ್ದಾರೆ. ವೃಕ್ಷ ಸಂವರ್ಧನೆ ಹೆಸರಲ್ಲಿ ಸಾವಿರಾರು ಮರಗಳ ಮಾರಣಹೋಮ ಮಾಡಲಾಗಿದೆ. ಬೃಹತ್ ಗಾತ್ರದ ಮರಗಳನ್ನ ನಾಶ ಮಾಡಿರುವ ಆರೋಪ ಶ್ರೀ ದೇನಾ ಭಗತ್ ಸೇವಾ ಟ್ರಸ್ಟ್ ವಿರುದ್ಧ ಕೇಳಿ ಬಂದಿದೆ.
ಅಮೃತ್ ಮಹಲ್ ಪ್ರದೇಶದಲ್ಲಿ ಸಸಿ ನೆಡುವ ಬದಲು ಮರ ಕಡಿದು ಕಾನೂನು ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆ 1500 ಸಾವಿರ ಎಕರೆ ಸರ್ಕಾರಿ ಅರಣ್ಯ ಖಾಸಗಿ ಟ್ರಸ್ಟ್ ಗೆ ಸರ್ಕಾರ ಗುತ್ತಿಗೆ ನೀಡಿತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ರೇಖಲಗೆರೆ ಅಮೃತ್ ಮಹಲ್ ಕಾವಲು ಭೂಮಿ ನಾಶ ಮಾಡಲಾಗಿದೆ. JCB ಬಳಸಿ ನೂರಾರು ಎಕರೆ ಅರಣ್ಯ ನಾಶ ಮಾಡಿದ ಆರೋಪ ಕೇಳಿ ಬಂದಿದ್ದು, ಶ್ರೀ ದೇನಾ ಭಗತ್ ಗುರೂಜಿ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2021 ರಲ್ಲಿ ಪಶುಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆ 1500 ಸಾವಿರ ಎಕರೆ ಅರಣ್ಯ ಲೀಸ್ ನೀಡಿತ್ತು. 30 ವರ್ಷಗಳ ಕಾಲ ಅರಣ್ಯ ಸಂರಕ್ಷಣೆಗೆ ಸರ್ಕಾರ ಗುತ್ತಿಗೆ ನೀಡಿತ್ತು, ಇದನ್ನೇ ಬಂಡವಾಳ ಮಾಡಿಕೊಂಡು ನೂರಾರು ಎಕರೆ ಅರಣ್ಯ ನಾಶಪಡಿಸಲಾಗಿದೆ. ಅರಣ್ಯ ಪ್ರದೇಶದ ಮರಗಳಿಗೆ ತೊಂದರೆ ಆಗದಂತೆ ಸಸಿ ನೆಡಲು ಷರತ್ತು ಹಾಕಿದ್ದ ಸರ್ಕಾರ ಗುತ್ತಿಗೆ ನೀಡಿತ್ತು.
ನಿಯಮ ಉಲ್ಲಂಘಿಸಿ ಟ್ರಸ್ಟ್ ನಿಯಮ ಮೀರಿ ಮರಗಳ ಮಾರಣಹೋಮ ಮಾಡಿದೆ. ಕೋಟಿ ವೃಕ್ಷ ಸಂರಕ್ಷಣೆ ಹೆಸರಲ್ಲಿ ಲೂಟಿ ಮಾಡಿರುವ ಆರೋಪ ಕೇಳಿ ಬಂದಿದೆ. ವಿವಿಧ ಖಾಸಗಿ ಕಂಪನಿಗಳ CSR ಫಂಡ್ ಬಳಸಿ ಅಭಿವೃದ್ಧಿ ಹೆಸರಲ್ಲಿ ಹಣ ದುರ್ಬಳಕೆ ಆರೋಪ ಕೇಳಿ ಬಂದಿದ್ದು, ಶ್ರೀ ದೇನಾ ಭಗತ್ ಸೇವಾ ಟ್ರಸ್ಟ್ ಅವ್ಯವಹಾರದ ಸಮಗ್ರ ತನಿಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
28/05/2026 08:08 am
LOADING...