ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕೆ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಚಿತ್ರದುರ್ಗ: ಚಿತ್ರದುರ್ಗ ಮತ್ತೆ ಪುಂಡರ ಹಾವಳಿ ಜಾಸ್ತಿ ಆಗುತ್ತಿದೆ. ಹಂದಿಯನ್ನ ದಿಟ್ಟಿಸಿ ನೋಡಿದ್ದಕ್ಕೆ ಅಪ್ರಾಪ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅಪ್ರಾಪ್ತ ಬಾಲಕನ ಸಹೋದರ ಹಾಗೂ ಚಿಕ್ಕಪ್ಪನ ಮೇಲೂ ಕೂಡಾ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮೇವು ತರಲು ಹೋದವನಿಗೆ 101 ಬಾರಿ ಕರೆ ಮಾಡಿ ಕರೆಸಿಕೊಂಡು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ರಾಡ್, ಚಾಕು, ಬಿಯರ್ ಬಾಟಲ್‌ನಿಂದ 20 ಕ್ಕೂ ಹೆಚ್ಚು ಜನರಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಚಿತ್ರದುರ್ಗದ ತಿಪ್ಪಾರೆಡ್ಡಿ ನಗರದ ಯಲ್ಲಮ್ಮ ದೇವಸ್ಥಾನ ರಸ್ತೆಯಲ್ಲಿ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ 17 ವರ್ಷ ದೇವರಾಜ ಹಲ್ಲೆಗೊಳಗಾದ ಬಾಲಕ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ದೇವರಾಜ ಸಹೋದರ ಶಾಂತ, ಚಿಕ್ಕಪ್ಪ ರಮೇಶ್ ಎಂಬುವವರು ಕೂಡಾ ಗಾಯಗೊಂಡಿದ್ದಾರೆ. ದೇವರಾಜ್ ಕಿವಿ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಬೆನ್ನಿಗೆ ಬಿಯರ್ ಬಾಟಲ್ ನಿಂದ ಚುಚ್ಚಿ ಪುಂಡರು ಪುಂಡಾಟ ಮೆರೆದಿದ್ದಾರೆ. ವೆಂಕಟೇಶ್, ಅಜ್ಜು, ತರುಣ್, ಉದಯ್, ವಿನಯ್, ಇತರರಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಗಾಯಾಳು ದೇವರಾಜ್ ಗೆ ದಾವಣಗೆರೆ SS ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ. ಚಿತ್ರದುರ್ಗದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Edited By : Manjunath H D
PublicNext

PublicNext

27/05/2026 05:02 pm

Cinque Terre

6.79 K

Cinque Terre

0

ಸಂಬಂಧಿತ ಸುದ್ದಿ