ಚಿತ್ರದುರ್ಗ: ಹೀಗೆ ಕಾಲಿನಿಂದ ವಿದ್ಯಾರ್ಥಿಗೆ ಥಳಿಸುತ್ತಿರುವ ಯುವಕ. ಮತ್ತೊಂದೆಡೆ ಬಾಲಕನ ತಲೆ ಹಿಡಿದು ಗೋಡೆಗೆ ಚಚ್ಚುತ್ತಿರುವ ವ್ಯಕ್ತಿ. ಈ ಕೌರ್ಯದ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಮಠದ ಹಾಸ್ಟೆಲ್. ಹೌದು ಇದೇ ಹಾಸ್ಟೆಲ್ ರೂಂ ಬಾಗಿಲು ಬಳಿ ಅಪ್ರಾಪ್ತ ಬಾಲಕನಿಗೆ ಮನ ಬಂದಂತೆ ಥಳಿಸಲಾಗಿದೆ. ಅದೇ ಮಠದಲ್ಲಿ ಸೇವೆ ಮಾಡುತ್ತಿದ್ದ ರವಿಚಂದ್ರ ಎಂಬ ಯುವಕ ಈ ರೀತಿ ಕೌರ್ಯ ಮೆರೆದಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಶಾಲಾ ವಿದ್ಯಾರ್ಥಿ ಮೇಲೆ ರೋಷಾವೇಷ ಪ್ರದರ್ಶಿಸಿದ್ದಾನೆ. ಬಾಲಕನ ಮೇಲೆ ರಾಕ್ಷಸನಂತೆ ಮುಗಿ ಬಿದ್ದು, ಥಳಿಸಿದ್ದಾನೆ. ಕೈಕಾಲುಗಳಿಂದ ಹೊಡೆದು, ತಲೆ ಗೋಡೆಗೆ ಹಾಕಿ ಚಚ್ಚಿದ್ದಾನೆ. ಸದ್ಯ ಯುವಕ ರವಿಚಂದ್ರನ ರಾಕ್ಷಸಿ ಕೃತ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೂ ವಿಷಯ ತಿಳಿಯುತ್ತಿದ್ದಂತೆ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯ್ ಕುಮಾರ್ CWC ಅಧಿಕಾರಿ ವೀಣಾ, DYSP ಅರುಣ್ ನಾಗೇಗೌಡ ಹಾಗೂ ಭರಮಸಾಗರ PI ಪ್ರಸಾದ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕೃತ್ಯ ನಡೆಸಿದ್ದು ಪಕ್ಕಾ ಆಗ್ತಿದ್ದಂತೆ ಭರಮಸಾಗರ ಠಾಣೆಯಲ್ಲಿ ಕೇಸ್ ಕೂಡಾ ದಾಖಲಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಂಜುನಾಥ್ ಆರೋಪಿ ರವಿಚಂದ್ರನ ವಿರುದ್ಧ ದೂರು ದಾಖಲಿಸಿದ್ದು, FIR ದಾಖಲಾಗುತ್ತಿದ್ದಂತೆ ಆರೋಪಿ ರವಿ ಎಸ್ಕೇಪ್ ಆಗಿದ್ದಾನೆ
ಒಟ್ಟಾರೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸುವ ಮಠದಲ್ಲಿ ಇಂಥ ರಾಕ್ಷಸಿ ಕೃತ್ಯ ಎಸಗಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಗುವಿನ ಮೇಲೆ ಹಲ್ಲೆ ನಡೆಸಿದ ಕೂಡಲೇ ಬಂಧಿಸಿ ಜೈಲಿಗಟ್ಟಲಿ ಅನ್ನೋದು ನಮ್ಮ ಆಶಯ.
PublicNext
20/05/2026 11:11 am
LOADING...