ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ನಗರದ ಹೃದಯಭಾಗದಲ್ಲೇ ದುರ್ವಾಸನೆ - ಇದು ಗಾಂಧಿ ಭವನದ ಖಾಲಿ ನಿವೇಶನವೂ ಕಸದ ತಿಪ್ಪೆಯೊ

ಚಳ್ಳಕೆರೆ ನಗರದ ಹೃದಯಭಾಗದ ಪೊಲೀಸ್ ಠಾಣೆ ತಾಲ್ಲೂಕು ಕಚೇರಿ ಮುಂಭಾಗ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮೀಪದ ಗಾಂಧಿಭವನ ಖಾಲಿ ನಿವೇಶನದಲ್ಲಿ ಕಸ ತ್ಯಾಜ್ಯ ,ಪ್ಲಾಸ್ಟಿಕ್ ಪೇಪರ್ ಪ್ಲಾಸ್ಟಿಕ್ ಲೋಟ, ಕಬ್ಬಿನ ಜಲ್ಲೆ ಸೇರಿದಂತೆ ಬೀರ್ ಬಾಟಲಿಗಳು ಮದ್ಯದ ಪೌಚುಗಳು ಸೇರಿದಂತೆ ಕಸವನ್ನು ತಂದು ಇಲ್ಲಿ ಸುರಿಯುತ್ತಿದ್ದು ಗಾಂಧಿ ಭವನ ಖಾಲಿ ನಿವೇಶನ ಈಗ ಕಸದ ತಿಪ್ಪೆಯಾಗಿ ಮಾರ್ಪಟ್ಟಿದೆ.

ಸುತ್ತಮುತ್ತಲಿನ ಇರುವ ಅಂಗಡಿ ,ಹೋಟೆಲ್, ಹಾಗೂ ಕಬ್ಬಿನ ಜ್ಯೂಸ್ ಮಾರಾಟ ಮಾಡುವವರು ಕಸವನ್ನು ತಂದು ಇಲ್ಲಿ ಸುರಿಯುತ್ತಿದ್ದು. ಇದೇ ಜಾಗದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಹೋಗುವುದರಿಂದ ಈ ಸ್ಥಳಕ್ಕೆ ಬಂದರೆ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಹೃದಯ ಭಾಗದಲ್ಲಿರುವಂತಹ ಈ ಗಾಂಧಿ ಭವನದ ಖಾಲಿ ನಿವೇಶನದಲ್ಲಿ ಕಸದ ತ್ಯಾಜ್ಯವನ್ನು ತಂದು ಹಾಕುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗುತ್ತಿದೆ.

Edited By : Vinayak Patil
PublicNext

PublicNext

20/05/2026 06:48 pm

Cinque Terre

12.52 K

Cinque Terre

0

ಸಂಬಂಧಿತ ಸುದ್ದಿ