ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ಆಘಾತಕಾರಿ ಮತ್ತು ಅಮಾನವೀಯ ಘಟನೆಯೊಂದು ವರದಿಯಾಗಿದೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಯೊಬ್ಬರ ಮೇಲೆಯೇ ರೌಡಿಗಳು ಬೀದಿ ಮಧ್ಯೆ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಮಾಹಿತಿಯ ಪ್ರಕಾರ, ಝಾನ್ಸಿಯಲ್ಲಿ ರಸ್ತೆ ಮಧ್ಯೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಕೆಲ ಗೂಂಡಾಗಳು ಏಕಾಏಕಿ ಸುತ್ತುವರೆದಿದ್ದಾರೆ. ಯಾವುದೇ ಭಯವಿಲ್ಲದೆ ಆ ಅಧಿಕಾರಿಯ ಮೇಲೆ ಸತತವಾಗಿ ಹಲ್ಲೆ ನಡೆಸುತ್ತಾ, ತಲೆ ಮತ್ತು ಮುಖದ ಮೇಲೆ ಬೇಕಾಬಿಟ್ಟಿ ಹೊಡೆದಿದ್ದಾರೆ. ಉದ್ರಿಕ್ತ ಗೂಂಡಾಗಳ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಪೊಲೀಸ್ ಅಧಿಕಾರಿ, "ನನ್ನನ್ನು ದಯವಿಟ್ಟು ಬಿಟ್ಟುಬಿಡಿ" ಎಂದು ಕೈಮುಗಿದು ಬೇಡಿಕೊಂಡರೂ, ಆ ಕ್ರೂರಿಗಳ ಮನಸ್ಸು ಕರಗಲಿಲ್ಲ.
ಈ ಇಡೀ ಘಟನೆಯಲ್ಲಿ ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ರಸ್ತೆಯಲ್ಲಿ ನೂರಾರು ಜನ ಓಡಾಡುತ್ತಿದ್ದರೂ ಯಾರೊಬ್ಬರೂ ಆ ಅಧಿಕಾರಿಯ ರಕ್ಷಣೆಗೆ ಬರಲಿಲ್ಲ. ನೆರೆದಿದ್ದ ಜನಸಮೂಹ ಕೇವಲ ಮೂಕಪ್ರೇಕ್ಷಕರಾಗಿ, ತಮಾಷೆ ನೋಡುತ್ತಾ ನಿಂತಿತ್ತು. ಕೆಲವರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರೇ ವಿನಃ, ಗೂಂಡಾಗಳನ್ನು ತಡೆಯುವ ಧೈರ್ಯ ಯಾರಿಗೂ ಬರಲಿಲ್ಲ.
PublicNext
30/05/2026 04:49 pm
LOADING...