ಐಪಿಎಲ್ 2026ರ ಅತಿ ದೊಡ್ಡ ಸಂಚಲನವಾಗಿ ಹೊರಹೊಮ್ಮಿರುವ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಇದೀಗ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದ್ದಾರೆ. ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿರುವ ಈ ಯುವ ಪ್ರತಿಭೆ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ನೀಡಿರುವ ಸಲಹೆ ನೀಡಿದ್ದಾರೆ.
ಐಪಿಎಲ್ 2026ರಲ್ಲಿ ಬಿರುಗಾಳಿಯಂತೆ ಅಬ್ಬರಿಸಿರುವ ರಾಜಸ್ಥಾನ್ ರಾಯಲ್ಸ್‌ನ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ, ಕ್ರಿಕೆಟ್ ಜಗತ್ತಿನ ಹೊಸ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಎದುರಾಳಿ ಬೌಲರ್‌ಗಳನ್ನು ದಂಡಿಸುತ್ತಾ, ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ಪುಡಿಗಟ್ಟಿದ ವೈಭವ್ ಇದೀಗ ಟೀಮ್ ಇಂಡಿಯಾ ಬಾಗಿಲು ತಟ್ಟುತ್ತಿದ್ದಾರೆ.
ಆದರೆ ಈ ಯುವ ಪ್ರತಿಭೆ ಬಗ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಹತ್ವದ ಸಲಹೆ ನೀಡಿದ್ದಾರೆ. ವೈಭವ್ ಅವರ ನೈಸರ್ಗಿಕ ಆಟದ ಶೈಲಿಗೆ ಯಾರೂ ಅಡ್ಡಿಪಡಿಸಬಾರದು, ಅನಗತ್ಯ ಒತ್ತಡ ಹೇರಬಾರದು ಎಂದು ಸಚಿನ್ ಎಚ್ಚರಿಕೆ ನೀಡಿದ್ದಾರೆ.
"ಅವನು ತನ್ನ ಬಗ್ಗೆ ತಾನು ಪ್ರಾಮಾಣಿಕವಾಗಿರಬೇಕು. ಅವನ ಆಟದಲ್ಲಿ ವಿಶೇಷತೆ ಇದೆ. ಹೆಚ್ಚು ಸಲಹೆ, ಹೆಚ್ಚು ಒತ್ತಡವೇ ಪ್ರತಿಭೆಯನ್ನು ಹಾಳು ಮಾಡುತ್ತದೆ" ಎಂದು ಸಚಿನ್ ಹೇಳಿದ್ದಾರೆ.
ವೈಭವ್ ಅವರ ಮಣಿಕಟ್ಟಿನ ಕೆಲಸ, ಚೆಂಡಿನ ಲೈನ್-ಲೆಂತ್ ಅನ್ನು ಕ್ಷಣಾರ್ಧದಲ್ಲಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ನಿರ್ಭಯ ಬ್ಯಾಟಿಂಗ್ ಶೈಲಿಯನ್ನು ಸಚಿನ್ ಮುಕ್ತಕಂಠದಿಂದ ಹೊಗಳಿದ್ದಾರೆ. 776 ರನ್ ಹಾಗೂ ದಾಖಲೆ ಸಂಖ್ಯೆಯ ಸಿಕ್ಸರ್‌ಗಳೊಂದಿಗೆ ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಕೇವಲ 47 ಎಸೆತಗಳಲ್ಲಿ 96 ರನ್ ಸಿಡಿಸಿದ ಅವರ ಕೊನೆಯ ಇನ್ನಿಂಗ್ಸ್ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿದೆ. ಭಾರತೀಯ ಕ್ರಿಕೆಟ್‌ನ ಮುಂದಿನ ಮಹಾತಾರೆ ಎಂದು ಈಗಾಗಲೇ ವೈಭವ್ ಸೂರ್ಯವಂಶಿ ಹೆಸರು ಕೇಳಿಬರುತ್ತಿದೆ.
PublicNext
31/05/2026 05:09 pm