ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣಿ ಇಲಾಖೆ ಉಪ ನಿರ್ದೇಶಕನ ಮನೆಯಲ್ಲಿ ಕುಬೇರನ ಖಜಾನೆ: ಅಧಿಕಾರಿಗಳ ಕಣ್ಣೇ ಕತ್ತಲಾಯ್ತು

ಒಡಿಶಾ ರಾಜ್ಯದಲ್ಲಿ ನಡೆದ ಒಂದು ಅಚ್ಚರಿಯ ಘಟನೆಯಲ್ಲಿ, ಕೇವಲ 30 ಸಾವಿರ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಇಲಾಖೆಯ ಉಪ ನಿರ್ದೇಶಕರೊಬ್ಬರ ಪ್ರಕರಣವು ಈಗ ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ 'ವಿಜಿಲೆನ್ಸ್ ನಗದು ಜಪ್ತಿ' ಪ್ರಕರಣವಾಗಿ ದಾಖಲಾಗಿದೆ. ಕೇವಲ 30 ಸಾವಿರ ರೂಪಾಯಿ ಲಂಚದ ಬೆನ್ನತ್ತಿದ ಅಧಿಕಾರಿಗಳಿಗೆ ಬರೋಬ್ಬರಿ 4 ಕೋಟಿ ರೂಪಾಯಿಗೂ ಅಧಿಕ ನಗದು ಮತ್ತು ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳ 'ಕುಬೇರನ ಖಜಾನೆ' ಪತ್ತೆಯಾಗಿದ್ದು, ಇದು ಒಡಿಶಾ ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ 'ವಿಜಿಲೆನ್ಸ್ ನಗದು ಜಪ್ತಿ' ಪ್ರಕರಣವಾಗಿ ದಾಖಲಾಗಿದೆ.

ಭುವನೇಶ್ವರದ ಗಣಿ ಇಲಾಖೆಯ ಉಪ ನಿರ್ದೇಶಕ ದೇಬಬ್ರತ ಮೊಹಾಂತಿ ಅವರನ್ನು ವಿಜಿಲೆನ್ಸ್ ಅಧಿಕಾರಿಗಳು ಲಂಚದ ಹಣದೊಂದಿಗೆ ರೆಡ್-ಹ್ಯಾಂಡ್ ಆಗಿ ಹಿಡಿದಿದ್ದರು. ಆದರೆ, ಈ ಸಣ್ಣ ಲಂಚದ ಪ್ರಕರಣದ ಬೆನ್ನತ್ತಿ ಅಧಿಕಾರಿಗಳು ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಕಂಡ ದೃಶ್ಯ ಸ್ವತಃ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.

ದಾಳಿಯ ವೇಳೆ, ಮೊಹಾಂತಿ ಅವರ ಮನೆಯಲ್ಲಿ ಬರೋಬ್ಬರಿ 4 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ. ನೋಟುಗಳ ರಾಶಿಯನ್ನು ಎಣಿಸಲು ಯಂತ್ರಗಳನ್ನು ತರಬೇಕಾಯಿತು. ನಗದಿನ ಜೊತೆಗೆ, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕೂಡ ಪತ್ತೆಯಾಗಿವೆ.

ಕೇವಲ ಒಂದು ಸಣ್ಣ ಭ್ರಷ್ಟಾಚಾರದ ತನಿಖೆ, ಕೊನೆಗೆ ಆ ಅಧಿಕಾರಿಯ ಅಕ್ರಮ ಆಸ್ತಿಯ ಬೃಹತ್ ಜಾಲವನ್ನು ಜಗತ್ತಿನ ಮುಂದೆ ತಂದಿಟ್ಟಿದೆ. ಸದ್ಯಕ್ಕೆ, ಆರೋಪಿ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ವಿಜಿಲೆನ್ಸ್ ತಂಡ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

Edited By : Nirmala Aralikatti
PublicNext

PublicNext

31/05/2026 12:26 pm

Cinque Terre

18.47 K

Cinque Terre

0