ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ 'ಮನ್ ಕಿ ಬಾತ್': ದಾಂಡೇಲಿಯಲ್ಲಿ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಭಾಗಿ

ಉತ್ತರ ಕನ್ನಡ : ಇಂದು ದಾಂಡೇಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ 'ಮನ್ ಕೀ ಬಾತ್' ಕಾರ್ಯಕ್ರಮದ 134ನೇ ಆವೃತ್ತಿಯನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ, ದೇಶದ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿ ಹಾಗೂ ಜನಸಾಮಾನ್ಯರ ಅಸಾಮಾನ್ಯ ಸಾಧನೆಗಳ ಕುರಿತು ಪ್ರಧಾನಿಯವರ ಪ್ರೇರಣಾದಾಯಕ ಮಾತುಗಳನ್ನು ಆಲಿಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿಗೆ ಪ್ರಧಾನಿ ಶ್ಲಾಘನೆ

ಮೋದಿ ಅವರು ತಮ್ಮ ಭಾಷಣದಲ್ಲಿ, ಕರ್ನಾಟಕದ ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿ (BAS) ಗ್ರಾಮೀಣ ಪ್ರದೇಶಗಳಲ್ಲಿ ವಿಜ್ಞಾನದ ಅರಿವು ಹಾಗೂ ಕುತೂಹಲ ಮೂಡಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದ್ದಾರೆ.

ವೀಕ್ಷಣಾ ಕಾರ್ಯಕ್ರಮಗಳು, ಕಾರ್ಯಾಗಾರಗಳು ಹಾಗೂ ಜಾಗೃತಿ ಅಭಿಯಾನಗಳ ಮೂಲಕ ವಿಜ್ಞಾನವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುತ್ತಿರುವ BAS ನ ಈ ಪ್ರಯತ್ನಗಳು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಈ ಗುರುತಿಸುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ವಿಶೇಷ ಮೆರಗು ನೀಡಿತು.

'ಮನ್ ಕೀ ಬಾತ್' ಕಾರ್ಯಕ್ರಮದ ಪ್ರೇರಣಾದಾಯಕ ಅಂಶಗಳು

'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಸದಾ ಕೃಷಿ, ಶಿಕ್ಷಣ, ತಂತ್ರಜ್ಞಾನ, ಆರೋಗ್ಯ, ಯುವಜನತೆ, ಮಹಿಳಾ ಸಬಲೀಕರಣ, ಸ್ಟಾರ್ಟ್‌ಅಪ್‌, ಪರಿಸರ ಸಂರಕ್ಷಣೆ, ಸ್ವಚ್ಛತೆ, ಕ್ರೀಡೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶ ಸಾಧಿಸುತ್ತಿರುವ ಪ್ರಗತಿ ಹಾಗೂ ಜನಸಾಮಾನ್ಯರ ಅಸಾಮಾನ್ಯ ಸಾಧನೆಗಳ ಕುರಿತು ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರ ಮಾತುಗಳು ಶ್ರೋತೃಗಳಿಗೆ ಯಾವಾಗಲೂ ವಿಶೇಷ ಹಾಗೂ ಸ್ಫೂರ್ತಿದಾಯಕ ಅನುಭವವನ್ನು ನೀಡುತ್ತವೆ.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ, ಶಾಸಕ ಅರವಿಂದ ಬೆಲ್ಲದ್, ಎಂ.ಟಿ. ತೆಂಗಿನಕಾಯಿ, ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ, ಉಪಮಹಾಪೌರರಾದ ಸಂತೋಷ ಚವ್ಹಾಣ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ ಸೇರಿದಂತೆ ಹಲವು ಗಣ್ಯರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Abhishek Kamoji
PublicNext

PublicNext

31/05/2026 03:21 pm

Cinque Terre

9.06 K

Cinque Terre

0

ಸಂಬಂಧಿತ ಸುದ್ದಿ