ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಸಂಚಾರದಲ್ಲಿದ್ದಾಗಲೇ ದ್ವಿಚಕ್ರ ವಾಹನದ ಮೇಲೆ ಕಾಡಾನೆ ದಾಳಿ - ಓಡಿಹೋಗಿ ಜೀವ ಉಳಿಸಿಕೊಂಡ ಸವಾರ

ಬೆಳ್ತಂಗಡಿ: ತಾಲೂಕಿನ ಅರಣ್ಯ ತೀರದ ಪ್ರದೇಶಗಳಲ್ಲಿ ಕಾಡಾನೆ ದಾಂದಲೆ ಮತ್ತೆ ಮುಂದುವರಿದಿದೆ. ದಿಡುಪೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಒಂಟಿ ಸಲಗ ದಾಳಿ ನಡೆಸಿ ವಾಹನ ಹಾನಿಗೊಳಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.

ದಿಡುಪೆಯ ನೆಕ್ಕಿಲೊಟ್ಟು ನಾರಾಯಣ ಗೌಡ ಅವರು, ರಾತ್ರಿ ವೇಳೆ ಕಾರ್ಯಕ್ರಮಕ್ಕೆ ಹೋಗಿ ವಾಪಸ್ಸು ಮನೆಗೆ ಹಿಂದಿರುಗುತ್ತಿದ್ದ ವೇಳೆ, ನೆಲ್ಯಡ್ಕ ರಸ್ತೆ ಬಳಿ ಒಂಟಿ ಸಲಗ ಎದುರಾಗಿದ್ದು, ಕೂಡಲೇ ನಾರಾಯಣ ಗೌಡ ಅವರು ಸ್ಕೂಟಿಯನ್ನು ಅಲ್ಲೇ ಬಿಟ್ಟು ಓಡಿಹೋಗಿ ಬಚಾವ್ ಆಗಿದ್ದಾರೆ. ಆನೆ ಸ್ಕೂಟಿಯನ್ನು ಹಾನಿಗೊಳಿಸಿದೆ.

Edited By : Nagaraj Tulugeri
PublicNext

PublicNext

01/06/2026 05:24 pm

Cinque Terre

7.76 K

Cinque Terre

0

ಸಂಬಂಧಿತ ಸುದ್ದಿ