ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಹಲ್ಲೆಯಿಂದ ಯುವಕ ಸಾವು?- ಮೂವರು ವಶಕ್ಕೆ

ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆಯಲ್ಲಿನ ಕಟ್ಟಡವೊಂದರ ಆವರಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪದಂಗಡಿ ನಿವಾಸಿ ಇಬ್ರಾಹಿಂ (54) ಬಂಧಿತ ಆರೋಪಿ.

ಶುಕ್ರವಾರ ಬೆಳಗ್ಗೆ ಬಂಟ್ವಾಳ ಪೆರ್ನೆ ನಿವಾಸಿ ನಿತಿನ್‌ ಎಂಬವರ ವಾಟ್ಸ್‌ಆ್ಯಪ್‌ಗೆ ಬೆಳ್ತಂಗಡಿ ಗುರುವಾಯನಕೆರೆ, ಅಲಾದಿಕೊಟ್ಟಿಗೆ ಎಂಬಲ್ಲಿ ಅಪರಿಚಿತ ಮೃತದೇಹ ಇರುವ ಬಗ್ಗೆ ಭಾವಚಿತ್ರ ಸಹಿತ ಮಾಹಿತಿ ಬಂದಿತ್ತು. ಈ ಭಾವಚಿತ್ರವನ್ನು ಪರಿಶೀಲಿಸಿದಾಗ ಮೃತವ್ಯಕ್ತಿಯು ತನ್ನ ಸಹೋದರ ಯತೀಶ (33) ಎಂಬವರದ್ದೆಂದು ತಿಳಿದು ಬಂದಿದೆ. ತಕ್ಷಣ ನಿತಿನ್ ಅವರು ಘಟನಾಸ್ಥಳಕ್ಕೆ ಬಂದು ಸ್ಥಳದಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸಿದಾಗ, ಜೂನ್ 1ರಂದು ಬೆಳಗ್ಗಿನ ಸಮಯ ತನ್ನ ಸಹೋದರನಿಗೆ ಯಶೋಧರ, ಮೋಹನ್ ಹಾಗೂ ಇಬ್ರಾಹಿಂ ಎಂಬವರುಗಳು ಹಲ್ಲೆ ಮಾಡುತ್ತಿರುವುದು ಕಂಡುಬಂದಿದೆ‌.

ಆರೋಪಿಗಳು ಹಲ್ಲೆ ಮಾಡಿರುವುದರಿಂದಲೇ ಯತೀಶ್ ಮೃತಪಟ್ಟಿರುವುದಾಗಿ ನಿತಿನ್ ಅವರು ದೂರು ದಾಖಲಿಸಿದ್ದಾರೆ‌. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅ ಕ್ರ : 65/2026, ಕಲಂ: 115(2) 103 ಜೊತೆಗೆ 3(5) ಬಿ.ಎನ್.ಎಸ್.ರಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Edited By : Abhishek Kamoji
Kshetra Samachara

Kshetra Samachara

01/06/2026 08:01 pm

Cinque Terre

1.11 K

Cinque Terre

1

ಸಂಬಂಧಿತ ಸುದ್ದಿ