ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ತಾಯಿ-ಮಗಳ ಮೇಲೆ ಭೀಕರ ನಾಯಿ ದಾಳಿ - ಕಣ್ಣೆದುರೇ ಕಂಡು ಗೇಟ್ ಬಂದ್ ಮಾಡಿದ ಮಾಲೀಕರ ವಿರುದ್ಧ ಆಕ್ರೋಶ

ತಮಿಳುನಾಡು : ನಾಗಪಟ್ಟಣಂ ಜಿಲ್ಲೆಯ ತಿರುತ್ತೂರೈಪೂಂಡಿ ನಗರದಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದೆ. ಸಾರ್ವಜನಿಕ ಬೀದಿಯೊಂದರಲ್ಲಿ ಬಡ ಕುಟುಂಬದ ತಾಯಿ ಮತ್ತು ಮಗಳ ಮೇಲೆ ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದೆ. ಈ ಘಟನೆಯನ್ನು ನಾಯಿ ಮಾಲೀಕರು ಎದುರಲ್ಲೇ ನಿಂತು ನೋಡಿದ್ದಾರೆ.

ತಮ್ಮ ನಾಯಿ ನೆರೆಹೊರೆಯವರ ಮೇಲೆ ದಾಳಿ ಮಾಡುತ್ತಿದ್ದರೂ, ಕಿಂಚಿತ್ತೂ ಕರುಣೆ ತೋರದೆ, ಮಾನವೀಯತೆ ಇಲ್ಲದೆ ಗೇಟ್ ಬಂದ್ ಮಾಡಿ ನೋಡುತ್ತಾ ನಿಂತಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಉದ್ದೇಶಪೂರ್ವಕವಾಗಿ ನಾಯಿಯನ್ನು ಬಿಟ್ಟು ದಾಳಿ ಮಾಡಿಸಿದ ಕೃತ್ಯ ಎಂದು ಆರೋಪಿಸಲಾಗಿದೆ. ಈ ಅಮಾನುಷ ದಾಳಿಯನ್ನು ನಾಯಿ ಮಾಲೀಕನ ಕುಟುಂಬದ ಸದಸ್ಯರು ನಿಂತು ಆನಂದಿಸುತ್ತಿದ್ದ ದೃಶ್ಯ ನೋಡುಗರನ್ನು ಕೆರಳಿಸಿದೆ. ಅಲ್ಲದೇ ಇಂತವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Edited By : Abhishek Kamoji
PublicNext

PublicNext

02/06/2026 07:29 pm

Cinque Terre

7.02 K

Cinque Terre

0

ಸಂಬಂಧಿತ ಸುದ್ದಿ