ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಸಿಎಂ 'ಡಿಕೆ' ಜೊತೆ ಯಾರೆಲ್ಲ ಪ್ರಮಾಣ? ಅಂತಿಮ ಪಟ್ಟಿಯಲ್ಲಿರುವ 10 ಮಂದಿ ಸಚಿವರ ಹೆಸರು ಇಲ್ಲಿದೆ!!

ಬೆಂಗಳೂರು/ ನವದೆಹಲಿ: ನಾಳೆ ಸಂಜೆ ನೂತನ ಸಿಎಂ ಆಗಿ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮೊದಲ ಹಂತದಲ್ಲಿ ಓರ್ವರನ್ನು ಹೊರತುಪಡಿಸಿ ಬಹುತೇಕ ಎಲ್ಲ ಹತ್ತು ಮಂದಿ ಹಿರಿಯ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೈಕಮಾಂಡ್‌ನಿಂದ ಅಂತಿಮವಾಗಿ ಮುದ್ರೆ ಒತ್ತಿಸಿಕೊಂಡ ಪಟ್ಟಿ ಇದೀಗ 'ಪಬ್ಲಿಕ್ ನೆಕ್ಸ್ಟ್'ಗೆ ಲಭ್ಯವಾಗಿದೆ.

ಇಂದು ಮಧ್ಯಾಹ್ನ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಮತ್ತು ಭಾವೀ ಸಿಎಂ ಡಿಕೆಶಿ ಅವರು ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿದ ಬಳಿಕವೇ ಸಿದ್ದವಾದುದು ಎನ್ನಲಾದ ಸಂಭಾವ್ಯ ಸಚಿವರ ಪಟ್ಟಿಯಲ್ಲಿರುವ ಹೆಸರುಗಳು ಇಂತಿವೆ‌.

ಕೆ.ಜೆ.ಜಾರ್ಜ್

ರಾಮಲಿಂಗಾರೆಡ್ಡಿ

ಯು.ಟಿ.ಖಾದರ್

ಕೃಷ್ಣ ಭೈರೇಗೌಡ

ಸತೀಶ್ ಜಾರಕಿಹೊಳಿ

ಎಂ.ಬಿ.ಪಾಟೀಲ್

ಡಾ.ಜಿ.ಪರಮೇಶ್ವರ್

ಕೆ.ಹೆಚ್.ಮುನಿಯಪ್ಪ

ಪ್ರಿಯಾಂಕ್ ಖರ್ಗೆ

ಯತೀಂದ್ರ ಸಿದ್ದರಾಮಯ್ಯ

Edited By : Nagaraj Tulugeri
PublicNext

PublicNext

02/06/2026 07:56 pm

Cinque Terre

28.32 K

Cinque Terre

2

ಸಂಬಂಧಿತ ಸುದ್ದಿ