ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ ಸ್ವಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಸ್ವಚ್ಛತೆ ಇಲ್ಲದೇ ನಗರದ ಜನ ಕಂಗಾಲಾಗಿದ್ದಾರೆ. ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ ೧೮ರಲ್ಲಿ ಚರಂಡಿಗಳೆಲ್ಲವೂ ಗಬ್ಬುನಾರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಅಲ್ಲಿನ ನಿವಾಸಿಗಳು ದಿನದೂಡುವಂತಹ ಪರಿಸ್ಥಿತಿ ಉಲ್ಬಣಗೊಂಡಿದೆ. ಸ್ವಚ್ಛತೆ ಇಲ್ಲದೆ ಅಲ್ಲಿನ ಚರಂಡಿಗಳೆಲ್ಲವೂ ಕಸದಿಂದ ತುಂಬಿತುಳುಕುತ್ತಿದ್ದು, ಕೆಟ್ಟ ದುರ್ವಾಸನೆ ಬೀರುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಅತ್ತ ತಲೆಹಾಕದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ನಗರಸಭೆ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಯಾವಾಗಲೋ ವರ್ಷಕ್ಕೊಮ್ಮೆ ಮಾತ್ರ ಬಂದು ಅಲ್ಪಸ್ವಲ್ಪ ಸ್ವಚ್ಛ ಮಾಡಿಹೋಗುತ್ತಾರೆ. ಆದರೆ ಕಂದಾಯ, ನೀರಿನ ಬಿಲ್ ಇತ್ಯಾದಿ ಶುಲ್ಕಗಳನ್ನು ಕಟ್ಟಿಸಿಕೊಳ್ಳೋಕೆ ಮಾತ್ರ ಸಮಯಕ್ಕೆ ಮುಂಚೆಯೇ ಬರುತ್ತಾರೆ. ಸ್ವಚ್ಛತೆ ವಿಚಾರದಲ್ಲಿ ಮಾತ್ರ ಯಾವುದೇ ಗಮನಹರಿಸುತ್ತಿಲ್ಲ. ಪ್ರತಿಬಾರಿಯೂ ನಮ್ಮ ನಮ್ಮ ಮನೆಗಳ ಮುಂಭಾಗದಲ್ಲಿ ನಾವೇ ಸ್ವಚ್ಛಪಡಿಸಿಕೊಳ್ಳೋ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
03/06/2026 09:54 am
LOADING...