ಈಗೆ ಕೈ ಯಲ್ಲಿ ಪ್ಲಾಸ್ಟಿಕ್ ಕ್ಯಾನ್ ಗಳನ್ನು ಹಿಡಿದು ಬೇಕೇ ಬೇಕು ಪೆಟ್ರೋಲ್ ಡೀಸೆಲ್ ಬೇಕು ಅಂತ ಆಕ್ರೋಶ ಹೊರಹಾಕುತ್ತಿರುವ ರೈತರು. ಇನ್ನು ಹೆದ್ದಾರಿಗೆ ಅಡ್ಡಲಾಗಿ ಮಿನಿ ಟ್ರಾಕ್ಟರ್, ಔಷಧಿ ಸಿಂಪಡಿಸೋ ಬೂಮರ್ ಗಳನ್ನು ಅಡ್ಡಹಾಕಿ ರಸ್ತೆ ಬಂದ್ ಮಾಡಿ, ಪೆಟ್ರೋಲ್ ಬಂಕ್ ಅನ್ನೂ ಸಹ ಬಂದ್ ಮಾಡಿಸಿ ಬಂಕ್ ಮಾಲೀಕನ ಜೊತೆ ವಾಗ್ವಾದ ನಡೆಸುತ್ತಿರೋ ದೃಶ್ಯಗಳು... ಇದೆಲ್ಲಾ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ನಗರದಲ್ಲಿ...
ಹೌದು ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಆದರೆ ಜಿಲ್ಲೆಯಲ್ಲಿ ಹೂ ಹಣ್ಣು ತರಕಾರಿ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ರೈತರು ಬೆಳೆಯುತ್ತಿದ್ದು ಸ್ವಲ್ಪ ಮಳೆ ಬಂದರೂ ತೋಟಕ್ಕೆ ಔಷಧಿ ಸಿಂಪಡಿಸೋದು ಕಾಮನ್.. ಔಷಧಿ ಸಿಂಪಡಿಸಬೇಕು ಅಂದ್ರೆ ಯಂತ್ರಕ್ಕೆ ಪೆಟ್ರೋಲ್ ಡೀಸೆಲ್ ಹಾಕಬೇಕಾಗಿರೋದು ಅನಿವಾರ್ಯ. ಆದರೆ ಪೆಟ್ರೋಲಿಯಂ ಕಂಪನಿಗಳ ಆದೇಶದಿಂದ ಈಗ ಪೆಟ್ರೋಲ್ ಬಂಕ್ ಮಾಲೀಕರು ಪ್ಲಾಸ್ಟಿಕ್ ಕ್ಯಾನ್ ಗಳಿಗೆ ಪೆಟ್ರೋಲ್ ಹಾಕೋದನ್ನ ನಿಲ್ಲಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಜಿಲ್ಲಾಡಳಿತ ಭವನದ ಬಳಿ ಇರೋ ಭಾರತ್ ಪೆಟ್ರೋಲ್ ಬಂಕ್ ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಪೆಟ್ರೋಲ್ ಡೀಸೆಲ್ ಹಾಕಲ್ಲ ಎಂದಿದ್ದಕ್ಕೆ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಮಾರ್ಗದ ಹೆದ್ದಾರಿಯನ್ನೇ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು...
ಇನ್ನು ಹೆದ್ದಾರಿ ತಡೆದು ರೈತರು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಸ್ಥಳಕ್ಕೆ ಬಂದ ಪೊಲೀಸರ ಜೊತೆಯಲ್ಲೇ ರೈತರು ವಾಗ್ವಾದ ನಡೆಸಿದ್ದಾರೆ. ಕೊನೆಗೆ ರೈತರ ಮನವೊಲಿಸಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ರೈತರ ವಾಹನಗಳನ್ನು ತೆರವು ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಒಟ್ಟಿನಲ್ಲಿ ಪೆಟ್ರೋಲ್ ಕಂಪನಿಗಳ ಆದೇಶ ಮಾಲೀಕರು ಹಾಗೂ ರೈತರ ನಡುವೆ ಪೀಕಲಾಟಕ್ಕೆ ಕಾರಣವಾಗಿ ಗಲಾಟೆಯಾಗುವಂತಾಗಿದೆ.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
17/06/2026 02:32 pm