ಬೆಂಗಳೂರು : ಹನಿ ಫಿಲಂಸ್ ಲಾಂಛನದಲ್ಲಿ ಎನ್. ಎ. ಶಿವಕುಮಾರ್ (ಕುಮಾರ್ ನೊಣವಿನಕೆರೆ) ನಿರ್ಮಿಸಿರುವ, ಆಯುರ್ ನಿರ್ದೇಶನದ ನನ್ನ ಮಗಳೇ ಸೂಪರ್ ಸ್ಟಾರ್ ಚಿತ್ರದ ಟೀಸರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು.
'ಸೀತಾರಾಮ' ಧಾರಾವಾಹಿ ಖ್ಯಾತಿಯ ಬಾಲನಟಿ
ಬೇಬಿ ರೀತು ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, 'ಭಜರಂಗಿ 2' ಖ್ಯಾತಿಯ ಚೆಲುವರಾಜ್ ಹಾಗೂ ಸಂಭ್ರಮಶ್ರೀ ಈ ಚಿತ್ರದ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ.ಗಣ್ಯರಿಂದ ಟೀಸರ್ ಹಾಗೂ ಹಾಡುಗಳ ಅನಾವರಣ .ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ. ಜಯಮಾಲ, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಎಂ. ಜಿ. ರಾಮಮೂರ್ತಿ ಮತ್ತು ಸಿರಿ ಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ ಅವರು ಟೀಸರ್ ಬಿಡುಗಡೆ ಮಾಡಿದರು.
ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರರಾಜ್, ಹಿರಿಯ ಸಾಹಿತಿ ಬಿ. ಆರ್. ಲಕ್ಷ್ಮಣರಾವ್ ಹಾಗೂ ಪರಿಸರ ಪ್ರೇಮಿ ರೇವತಿ ಕಾಮತ್ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಚಿತ್ರದ ಹಾಡುಗಳು ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿವೆ.
ಮೂಲತಃ ಸಂಕಲನಕಾರನಾದ ನನಗೆ ನಿರ್ದೇಶಕನಾಗಿ ಇದು ಮೊದಲ ಸಿನಿಮಾ. ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಿದಾಗ, ಮಕ್ಕಳು ಎದುರಿಸುವ ತೊಂದರೆಗಳೇ ಈ ಚಿತ್ರದ ಮುಖ್ಯ ಕಥಾವಸ್ತು. ಬಿ. ಆರ್. ಲಕ್ಷ್ಮಣರಾವ್ ಅವರು ಬರೆದಿರುವ ಮೂರು ಅದ್ಭುತ ಹಾಡುಗಳಿಗೆ ಕೆವಿನ್ ಸಂಗೀತ ನೀಡಿದ್ದಾರೆ.
ನಾಯಕ ನಟ ಚೆಲುವರಾಜ್ 15 ವರ್ಷಗಳ ಹಿಂದೆ 'ಮಹಾಭಾರತ' ಧಾರಾವಾಹಿಯಲ್ಲಿ ದುರ್ಯೋಧನನಾಗಿ ನಟಿಸಿದಾಗ ನನಗೆ ಮೇಕಪ್ ಮಾಡಿದ್ದೇ ನಿರ್ಮಾಪಕ ಕುಮಾರ್ ಅವರು. ಇಷ್ಟು ದಿನ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾನು, ಈ ಚಿತ್ರದ ಮೂಲಕ ವಿಭಿನ್ನ ಪಾತ್ರದೊಂದಿಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದೇನೆ.
ಇದು ಪ್ರತಿಯೊಬ್ಬ ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಕುಳಿತು ನೋಡಬೇಕಾದ ಸಿನಿಮಾ. ಚಿತ್ರದಲ್ಲಿ ನಾನು ಬೇಬಿ ರೀತುಸಿಂಗ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ಮಾಪಕ ಎನ್. ಎ. ಶಿವಕುಮಾರ್ ಇದು ನಮ್ಮ ಹನಿ ಫಿಲಂ ಮೇಕರ್ಸ್ ಸಂಸ್ಥೆಯ 3ನೇ ಚಿತ್ರ. ಸಮಾಜಕ್ಕೆ ಒಳ್ಳೆಯ ಸಂದೇಶವಿರುವ ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ.
ಕಾರ್ಯಕ್ರಮದಲ್ಲಿ ಸಾಹಿತಿ ಬಿ. ಆರ್. ಲಕ್ಷ್ಮಣ್ ರಾವ್ ಮತ್ತು ಸಂಗೀತ ನಿರ್ದೇಶಕ ಕೆವಿನ್ ಹಾಡುಗಳ ಕುರಿತು ಮಾಹಿತಿ ಹಂಚಿಕೊಂಡರು. ನಟ ವಿಕ್ರಮ್ ಸೂರಿ ತಮ್ಮ ಪಾತ್ರದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಾದ ರಾಘವೇಂದ್ರ ರೆಡ್ಡಿ, ಸಚಿನ್, ಸಂಕಲನಕಾರ ರಾಘವ ಅರ್ಜುನ್ ಡೋಣಿ ಹಾಗೂ ಹಿರಿಯ ಪ್ರಸಾದನ ಕಲಾವಿದ ರಾಮಕೃಷ್ಣ ಉಪಸ್ಥಿತರಿದ್ದರು.ಚಿತ್ರದ ಯಶಸ್ಸಿಗೆ ಗಣ್ಯರು ಹಾಗೂ ಸಿನೆಮಾ ಪ್ರೇಮಿಗಳು ಶುಭ ಹಾರೈಸಿದ್ದಾರೆ.
PublicNext
03/06/2026 01:01 pm