ನಂಜನಗೂಡು: ನಂಜನಗೂಡಿನಲ್ಲಿ ಕಾಡುಪ್ರಾಣಿಗಳ ಉಪಟಳ ನಿಯಂತ್ರಣಕ್ಕೆ ಬಂದಿಲ್ಲ.
ಗ್ರಾಮಸ್ಥರ ನಿದ್ರೆಗೆಡಿಸುತ್ತಿರುವ ಚಿರತೆ ಸೆರೆಗೆ ಆಗ್ರಹಿಸಿದ್ದಾರೆ.
ಕೃಷಿ ಭೂಮಿಯ ತೋಟದ ಮನೆಯ ಬಳಿ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ತಾಲ್ಲೂಕಿನ ವೀರೇಗೌಡನ ಹುಂಡಿ ಗ್ರಾಮದ ಪ್ರತ್ಯಕ್ಷ ಎಂಬುವರಿಗೆ ಸೇರಿದ ತೋಟದ ಮನೆಯಲ್ಲಿ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟ ಸೆರೆಯಾಗಿದೆ. ಬೆಲೆಬಾಳುವ ಸಾಕು ನಾಯಿಯನ್ನು ಚಿರತೆ ಬಲಿ ಪಡೆದಿದೆ.
ಚಿರತೆಯ ಕಾಟಕ್ಕೆ ಕೃಷಿ ಜಮೀನಿಗೆ ತೆರಳುವ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವೀರೇಗೌಡನ ಹುಂಡಿ ಗ್ರಾಮದ ಸುತ್ತಮುತ್ತ ಸಾಕಷ್ಟು ದಿನಗಳಿಂದ ಸಾಕು ಪ್ರಾಣಿಗಳನ್ನು ಬಲಿ ಪಡೆದಿದೆ. ಈಗಾಗಲೇ ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಬೋನು ಇಟ್ಟು ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.
PublicNext
04/06/2026 02:18 pm
LOADING...