ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಆಸ್ತಿ ಜಗಳಕ್ಕೆ ದಾಯಾದಿಗಳ ಕ್ರೂರ ದಾಳಿ: ಯುವಕ ಆಸ್ಪತ್ರೆಗೆ, ಕೆ.ಆರ್.ನಗರದಲ್ಲಿ ಆತಂಕ

ಮೈಸೂರು: ಮೈಸೂರು ಜಿಲ್ಲೆಯ ಕೆ.ಆರ್.ನಗರ ಪಟ್ಟಣದ ಚೀರನಹಳ್ಳಿ ರಸ್ತೆಯಲ್ಲಿ ಆಸ್ತಿ ಮತ್ತು ಜಮೀನು ಉಳಿಮೆ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಮಾರಾಮಾರಿ ನಡೆದಿದ್ದು, ಯುವಕನೊಬ್ಬ ಆಸ್ಪತ್ರೆ ಸೇರಿದ್ದಾನೆ.

ಜಮೀನು ಉಳಿಮೆ ವಿಚಾರವಾಗಿ ಜಗದೀಶ್ ಎಂಬ ಯುವಕನ ಮೇಲೆ ಕುಮಾರ ಹಾಗೂ ಆತನ ಪತ್ನಿ ಜಯಮ್ಮ ದೊಣ್ಣೆಯಿಂದ ತೀವ್ರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯನ್ನು ತಡೆಯಲು ಬಂದ ಜಗದೀಶ್ ತಂದೆ ಹಾಗೂ ದೊಡ್ಡಪ್ಪನ ಮೇಲೂ ದಂಪತಿಗಳು ದಾಳಿ ಮಾಡಿದ್ದಾರೆ. ಹಲ್ಲೆಗೊಳಗಾದ ಜಗದೀಶ್ ಪ್ರಸ್ತುತ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Somashekar
PublicNext

PublicNext

16/06/2026 12:02 pm

Cinque Terre

7.1 K

Cinque Terre

0