ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: 43 ಆದಿವಾಸಿ ಕುಟುಂಬಕ್ಕೆ ಮನೆ ಹಸ್ತಾಂತರಿಸಿದ ಶಾಸಕ ಪೊನ್ನಣ್ಣ

ವಿರಾಜಪೇಟೆ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಶಾಶ್ವತ ಸೂರಿಲ್ಲದೆ ಹರಕು ಮುರುಕು ಪ್ಲಾಸ್ಟಿಕ್ ಹೊದಿಕೆಯಲ್ಲಿ ಜೀವನ ದೂಡುತ್ತಿದ್ದರು. ಸ್ವಂತ ಸೂರಿಗಾಗಿ ಆಗ್ರಹಿಸಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರಿಗೆ ಹಲವು ಬಾರಿ ಮನವಿಗಳು ಸಲ್ಲಿಸಿದರು.

ತಾಲ್ಲೂಕು ಕಚೇರಿ ಜಿಲ್ಲಾಡಳಿತ ಕಚೇರಿಗಳ ಮುಂದೆ ಹಗಲು ರಾತ್ರಿ ಪ್ರತಿಭಟನೆಗಳು ನಡೆದ ಫಲವಾಗಿ ಇದೀಗ ಕಾಲ ಕೂಡಿ ಬಂದಿದ್ದು ಸ್ವಂತ ಸೂರಿಗಾಗಿ ಆಗ್ರಹಿಸಿದವರಿಗೆ ಕೊನೆಗೂ ಸೂರು ಸಿಕ್ಕಂತಾಗಿದೆ. ಶಾಸಕ ಪೊನ್ನಣ್ಣ ಫಲವಾಗಿ ಸೂರಿಲ್ಲದವರಿಗೆ ಸ್ವಂತ ಸೂರಿನ ಭಾಗ್ಯ ಸಿಕ್ಕಿದ್ದು ಸ್ವಂತ ಸೂರಿಲ್ಲದವರಿಗೆ ಕೊನೆಗೂ ಸ್ವಂತ ಮನೆ ಸಿಕ್ಕಿದ್ದು ಹೋರಾಟ ನಡೆಸಿದವರ ಮನೆ ಮನೆಯಲ್ಲೂ ಸಂತಸ ಮನೆ ಮಾಡಿದೆ.

ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ ನೂತನ ಮನೆಗಳ ಹಸ್ತಾಂತರ ನಡೆಸಿದರು. ಐಟಿಡಿಪಿ ಇಲಾಖೆ ನಿಧಿ ಹಾಗೂ ಸಿಎಸ್ಆರ್ ಅನುದಾನದ ಮೂಲಕ ಒಟ್ಟು ಆರು ಲಕ್ಷ ವೆಚ್ಚದಲ್ಲಿ ಸುಸರ್ಜಿತವಾದ ಒನ್ ಬಿ. ಹೆಚ್ ಕೆ ಮನೆಯನ್ನ ನಿರ್ಮಿಸಿದ್ದು ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ ಅದರಲ್ಲಿ ಮೊದಲ ಹಂತದಲ್ಲಿ 43 ಮನೆಗಳ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದ್ದು ಉಳಿದ ಮನೆಗಳಲ್ಲಿ ಮುಂದಿನ ದಿನದಲ್ಲಿ ಹಸ್ತಾಂತರಿಸಲಾಗುವುದೆಂದು ಶಾಸಕ ಪೊನ್ನಣ್ಣ ತಿಳಿಸಿದರು.

ಮನೆ ಉದ್ಘಾಟನೆ ಆಗಮಿಸಿದ ಶಾಸಕ ಪೊನ್ನಣ್ಣರನ್ನ ಫಲಾನುಭವಿಗಳು ಭವ್ಯ ಸ್ವಾಗತ ಕೋರಿದರು ಸಾಂಪ್ರದಾಯಿಕ ವಾಲಗದೊಂದಿಗೆ ಮನೆ ಹಸ್ತಾಂತರ ಸ್ಥಳಕ್ಕೆ ಕರೆತಂದರು. ಕಳೆದ ಹಲವು ವರ್ಷಗಳಿಂದ ಸ್ವಂತ ಸೂರಿಗಾಗಿ ನಡೆದ ಹೋರಾಟದ ಫಲವಾಗಿ ಇದೀಗ ಸ್ವಂತ ಸೂರು ಸಿಕ್ಕಿದ್ದು ಆದಿವಾಸಿ ಕುಟುಂಬಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕೊನೆಗೂ ಪ್ಲಾಸ್ಟಿಕ್ ಹೊದಿಕೆಯಿಂದ ಕಾಂಕ್ರೀಟ್ ಮನೆಗಳತ್ತ ಆದಿವಾಸಿಗಳು ಹೆಜ್ಜೆ ಹಾಕಿದ್ದು ಸ್ವಂತ ಸೂರಿನ ಕನಸು ಕಂಡವರಿಗೆ ಕೊನೆಗೂ ಸ್ವಂತ ಸೂರು ಸಿಕ್ಕಿದ್ದು ಎಲ್ಲಿಲ್ಲದ ಖುಷಿ ಮನೆ ಮಾಡುವಂತೆ ಮಾಡಿದೆ.

Edited By :
PublicNext

PublicNext

06/06/2026 09:26 am

Cinque Terre

10.16 K

Cinque Terre

0

ಸಂಬಂಧಿತ ಸುದ್ದಿ