ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಥಿಯೇಟರ್‌ನಲ್ಲಿ ದೊಡ್ಮನ್ಸ ಅಬ್ಬರ! ಸಿನಿಮಾ ನೋಡಿ ಜನ ಏನಂದ್ರು ಗೊತ್ತಾ?!

ಬೆಂಗಳೂರು : ಗಾಂಧಿನಗರದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ‘ವೇದಿಕ್ ಕಾಸ್ಮೋಸ್’ ಬ್ಯಾನರ್‌ನ ಭಿನ್ನ ಶೈಲಿಯ ಕೌಟುಂಬಿಕ ಚಿತ್ರ ‘ದೊಡ್ಮನ್ಸ’ ಕೊನೆಗೂ ಅದ್ದೂರಿಯಾಗಿ ತೆರೆಗೆ ಬಂದಿದೆ. ಶರತ್ ಕೃಷ್ಣ ಅವರ ಒನ್ ಮ್ಯಾನ್ ಶೋ ನೋಡಲು ಥಿಯೇಟರ್‌ಗಳ ಮುಂದೆ ಜನ ಮುಗಿಬೀಳ್ತಿದ್ದಾರೆ. ಹಾಗಾದ್ರೆ ಸಿನಿಮಾ ರಿಲೀಸ್ ಆಗಿ ಥಿಯೇಟರ್‌ನಿಂದ ಹೊರಬಂದ ಪ್ರೇಕ್ಷಕ ಪ್ರಭುಗಳು ಈ ಚಿತ್ರದ ಬಗ್ಗೆ ಏನಂತಿದ್ದಾರೆ? ಬನ್ನಿ ಲೈವ್ ಆಗಿ ಕೇಳೋಣ...ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಇದೊಂದು ಮತ್ತೊಂದು ಸುವರ್ಣ ಅಧ್ಯಾಯ ಅಂತಾನೇ ಹೇಳಬಹುದು. ಹೌದು, ಚಿತ್ರದ ಹೀರೋ ಮತ್ತು ಡೈರೆಕ್ಟರ್ ಆಗಿರೋ ಶರತ್ ಕೃಷ್ಣ ಅವರ ಮಲ್ಟಿ-ಟ್ಯಾಲೆಂಟ್‌ಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.

ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಕಥೆಯನ್ನು ಇಟ್ಟುಕೊಂಡು, ಕಣ್ಣಿಗೆ ಕಟ್ಟುವ ಹಾಗೆ ಆ್ಯಕ್ಷನ್ ಕಟ್ ಹೇಳಿರೋ ಶರತ್, ಕ್ಯಾಮೆರಾ ಮುಂದುಗಡೆ ನಾಯಕನಾಗಿಯೂ ಮಾಸ್ ಹಾಗೂ ಕ್ಲಾಸ್ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ನೋಡಿದ ಫ್ಯಾಮಿಲಿ ಆಡಿಯನ್ಸ್, "ಡೈರೆಕ್ಷನ್ ಮಾಡ್ತಾ ಇಷ್ಟೊಂದು ಅದ್ಭುತವಾಗಿ ನಟಿಸೋದು ಸುಲಭದ ಮಾತಲ್ಲ, ಶರತ್ ಕೃಷ್ಣ ರಿಯಲಿ ಗ್ರೇಟ್" ಅಂತ ಕೊಂಡಾಡ್ತಿದ್ದಾರೆ.

Edited By :
PublicNext

PublicNext

19/06/2026 04:14 pm

Cinque Terre

10.7 K

Cinque Terre

0

ಸಂಬಂಧಿತ ಸುದ್ದಿ