ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​ಮನೆ CCTV ದೃಶ್ಯ ನೋಡಿ ಕೆರಳಿದ ಗಂಡ: ಮದುವೆಯಾದ 45 ದಿನಕ್ಕೆ ಪತ್ನಿ ದುರಂತ ಅಂತ್ಯ! ಅಷ್ಟಕ್ಕೂ ಅಲ್ಲೇನಾಗಿತ್ತು?

​ಮಹಾರಾಷ್ಟ್ರ: ಮದುವೆಯಾಗಿ ಕೇವಲ 45 ದಿನಗಳು ಕಳೆಯುವಷ್ಟರಲ್ಲೇ ಯುವತಿಯೊಬ್ಬಳು ದುರಂತ ಅಂತ್ಯ ಕಂಡಿರುವ ಘಟನೆ ಮಹಾರಾಷ್ಟ್ರದ ಅಂಬರನಾಥ್‌ನಲ್ಲಿ ನಡೆದಿದೆ. ಮನೆಯ ಸಿಸಿ ಟಿವಿ ದೃಶ್ಯಗಳನ್ನು ನೋಡಿ ಪತಿ ಹಲ್ಲೆ ನಡೆಸಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​ವರದಕ್ಷಿಣೆ ಕಿರುಕುಳ, ಸಿಸಿಟಿವಿ ಕಣ್ಗಾವಲು!

ಮೃತ ಯುವತಿಯನ್ನು ವಿಶಾಖಾ ತಿಲ್ಕರ್ ಎಂದು ಗುರುತಿಸಲಾಗಿದೆ. ಈಕೆಗೆ ಏಪ್ರಿಲ್ 30 ರಂದು ಡಾ. ನಿತಿನ್ ತಿಲ್ಕರ್ ಎಂಬಾತನೊಂದಿಗೆ ವಿವಾಹವಾಗಿತ್ತು. ಮಗಳು ಸುಖವಾಗಿರಲಿ ಎಂದು ಪೋಷಕರು ಪ್ರತಿಷ್ಠಿತ ಕುಟುಂಬದ ವರನಿಗೆ ಕೊಟ್ಟು ಮದುವೆ ಮಾಡಿಸಿದ್ದರು.

ಆದರೆ, ಮದುವೆಯಾದ ದಿನದಿಂದಲೇ ವಿಶಾಖಾಗೆ ಪತಿ ಹಾಗೂ ಆತನ ಮನೆಯವರಿಂದ ಮಾನಸಿಕ ಮತ್ತು ದೈಹಿಕ ಕಿರುಕುಳ ಆರಂಭವಾಗಿತ್ತು. "ಮದುವೆಗೆ ಬಂದ ಗಿಫ್ಟ್ ಚೀಪ್ ಆಗಿದೆ, ವರದಕ್ಷಿಣೆ ಕಡಿಮೆಯಾಗಿದೆ, ಮದುವೆ ಖರ್ಚು ಹೆಚ್ಚಾಗಿದೆ" ಎಂದು ಪತಿ ಪದೇ ಪದೇ ಪತ್ನಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

​ಅಷ್ಟೇ ಅಲ್ಲದೆ, ಪತ್ನಿಯ ಪ್ರತಿಯೊಂದು ಚಲನವಲನದ ಮೇಲೆ ಕಣ್ಣಿಡಲು ಈ ವಿಕೃತ ಪತಿ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಪ್ರತಿ ದಿನ ಕಣ್ಗಾವಲು ಇಟ್ಟು, ಆಕೆ ಏನೇ ಮಾಡಿದರೂ ತಪ್ಪು ಹುಡುಕಿ ಸವಾರಿ ಮಾಡುತ್ತಿದ್ದ ಎಂದು ವಿಶಾಖಾ ಪೋಷಕರು ಆರೋಪಿಸಿದ್ದಾರೆ.

​ಪಕ್ಕದ ಮನೆಯವರ ಜೊತೆ ಮಾತನಾಡಿದ್ದೇ ತಪ್ಪಾಯ್ತು!

ಕೆಲ ದಿನಗಳ ಹಿಂದೆ ವಿಶಾಖಾ ಪಕ್ಕದ ಮನೆಯ ಮಹಿಳೆಯೊಬ್ಬರ ಜೊತೆ ಮಾತನಾಡಿದ್ದರು. ಸಿಸಿಟಿವಿ ಪರಿಶೀಲಿಸುವಾಗ ಈ ದೃಶ್ಯವನ್ನು ಕಂಡ ಪತಿ ನಿತಿನ್ ತಿಲ್ಕರ್ ಕೆರಳಿದ್ದಾನೆ. ಇದೇ ವಿಚಾರವಾಗಿ ಜಗಳ ತೆಗೆದು ವಿಶಾಖಾ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

​ಮಗಳನ್ನು ಕರೆತರಲು ಪ್ಲಾನ್ ಮಾಡುವಷ್ಟರಲ್ಲೇ ಸಾವು

ಪತಿ ಮಾಡಿದ ಹಲ್ಲೆ ಹಾಗೂ ಕಿರುಕುಳದ ಕುರಿತು ವಿಶಾಖಾ ತನ್ನ ತಾಯಿಗೆ ಫೋನ್ ಮಾಡಿ ಅತ್ತಿದ್ದಾಳೆ. ವಿಷಯ ತಿಳಿದ ಪೋಷಕರು ತಕ್ಷಣವೇ ಮಗಳನ್ನು ಮನೆಗೆ ಕರೆದುಕೊಂಡು ಬರಲು ನಿರ್ಧರಿಸಿದ್ದರು. ಮಾರನೇ ದಿನ ಬೆಳಗ್ಗೆ ಹೋಗಿ ಕರೆತರಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಅಷ್ಟರಲ್ಲೇ ವಿಶಾಖಾ ತನ್ನ ಬದುಕು ಮುಗಿಸಿದ್ದಾಳೆ ಎಂಬ ದುರಂತ ಸುದ್ದಿ ಪೋಷಕರಿಗೆ ತಲುಪಿದೆ.

​ಪತಿ ಅರೆಸ್ಟ್, ಅತ್ತೆ-ಮಾವ ಪರಾರಿ

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ಪತಿ ಡಾ. ನಿತಿನ್ ತಿಲ್ಕರ್‌ನನ್ನು ಪೊಲೀಸರು ಬಂಧಿಸಿದ್ದು, ಆತನ ಪೋಷಕರು ತಲೆಮರೆಸಿಕೊಂಡಿದ್ದಾರೆ. ತನಿಖೆಯ ಭಾಗವಾಗಿ ಪೊಲೀಸರು ವಿಶಾಖಾ ಅವರ ಮೊಬೈಲ್ ಫೋನ್ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Edited By : Abhishek Kamoji
PublicNext

PublicNext

18/06/2026 10:34 pm

Cinque Terre

67.24 K

Cinque Terre

2

ಸಂಬಂಧಿತ ಸುದ್ದಿ