ರೀಲ್ಸ್ ಲೋಕದಲ್ಲಿ ಸದಾ ಮಿಂಚುವ ನಟಿ ನಿವೇದಿತಾ ಗೌಡ ಇದೀಗ ಡ್ಯಾನ್ಸರ್ ಕಿಶನ್ ಜೊತೆಗೂಡಿ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. 'ಹೇ... ನವಿಲೇ' ಹಾಡಿಗೆ ನೃತ್ಯ ಮಾಡಿರುವ ಈ ಜೋಡಿ, ನವಿಲುಗರಿ ಥೀಮ್ ಅನ್ನು ಅದ್ಭುತವಾಗಿ ಅಳವಡಿಸಿಕೊಂಡಿದೆ. ಸರಳ ಹಾಗೂ ಆಕರ್ಷಕ ಹೆಜ್ಜೆಗಳೊಂದಿಗೆ ಮಾದಕವಾಗಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ರೀಲ್ಸ್‌ನಲ್ಲಿ ನಿವೇದಿತಾ ಗೌಡ ನವಿಲುಗರಿಗಳಿಂದ ವಿನ್ಯಾಸಗೊಳಿಸಿದ ವಿಶೇಷ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಕಿಶನ್ ತಮ್ಮ ದೇಹಕ್ಕೆ ನವಿಲಿನ ಬಣ್ಣವನ್ನೇ ಪೇಂಟ್ ಮಾಡಿಕೊಂಡು, ನವಿಲುಗರಿಗಳನ್ನು ತೊಟ್ಟು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಕೂಡ ಅದೇ ಬಣ್ಣದ ವೆಲ್ವೆಟ್ ಕಟರ್ ಸ್ಕರ್ಟ್ ಧರಿಸಿ, ತಮ್ಮ ನೃತ್ಯದ ಮೂಲಕ ಹಾಡಿನ ಭಾವವನ್ನು ಅದ್ಭುತವಾಗಿ ಹೊರಹಾಕಿದ್ದಾರೆ. ಇಬ್ಬರ ಕೆಮಿಸ್ಟ್ರಿ ಹಾಗೂ ನೃತ್ಯದ ಸೊಬಗು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ರೀಲ್ಸ್ ಅಪ್‌ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿ ವೈರಲ್ ಆಗಿದೆ.
PublicNext
19/06/2026 11:57 am
LOADING...