ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಆಸ್ಟ್ರೇಲಿಯಾ ಪ್ರವಾಸಿಗನಿಗೆ ಕಿಸ್ ಕೊಡುವಂತೆ ಪೀಡಿಸಿದ ಯುವಕ - ವಿದೇಶಿ ವ್ಯಕ್ತಿಗೆ ತೀವ್ರ ಮುಜುಗರ

ಕೋಲ್ಕತ್ತಾ: ಭಾರತ ಪ್ರವಾಸಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಪ್ರಸಿದ್ಧ ಟ್ರಾವೆಲ್ ಬ್ಲಾಗರ್ ಒಬ್ಬರಿಗೆ ಕೋಲ್ಕತ್ತಾದ ಬೀದಿಯಲ್ಲಿ ಅತ್ಯಂತ ಕಹಿ ಮತ್ತು ಮುಜುಗರದ ಅನುಭವವಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದೇಶಿ ಪ್ರವಾಸಿಗನ ಕೈ ಹಿಡಿದು ಸ್ಥಳೀಯ ಯುವಕನೊಬ್ಬ ಸಾರ್ವಜನಿಕವಾಗಿಯೇ ಮುತ್ತು (Kiss) ಕೊಡುವಂತೆ ಪೀಡಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

'ಮಾರ್ಕೊ ರೋಮ್ಸ್' (Marco Roams) ಎಂಬ ಆಸ್ಟ್ರೇಲಿಯಾದ ಪ್ರವಾಸಿಗ ಕೋಲ್ಕತ್ತಾದ ಜನನಿಬಿಡ ರಸ್ತೆಯೊಂದರಲ್ಲಿ ವಿಡಿಯೋ ಮಾಡುತ್ತಾ ಸಾಗುತ್ತಿದ್ದರು. ಈ ವೇಳೆ ರಿಕ್ಷಾದಲ್ಲಿ ಕುಳಿತಿದ್ದ ಸ್ಥಳೀಯ ಯುವಕನೊಬ್ಬ ಮಾರ್ಕೊ ಅವರನ್ನು ಕೂಗಿ ಕರೆದಿದ್ದಾನೆ. ಅವರು ಹತ್ತಿರ ಹೋಗುತ್ತಿದ್ದಂತೆ, ಆ ಯುವಕ ತನ್ನ ಕೆನ್ನೆಯನ್ನು ತೋರಿಸುತ್ತಾ "ನನಗೆ ಇಲ್ಲಿ ಕಿಸ್ ಕೊಡು, ಕಿಸ್ ಮಾಡು" ಎಂದು ಪದೇ ಪದೇ ಕೇಳಲು ಆರಂಭಿಸಿದ್ದಾನೆ.

ಯುವಕನ ಈ ವಿಲಕ್ಷಣ ಬೇಡಿಕೆಯಿಂದ ಗಾಬರಿಗೊಂಡ ಮಾರ್ಕೊ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿ, "ನಿನಗೆ ಕಿಸ್ ಮಾಡಬೇಕೇ? ಕ್ಷಮಿಸು, ನಾನು ಸ್ಟ್ರೇಟ್ (Heterosexual)" ಎಂದು ನಯವಾಗಿಯೇ ನಿರಾಕರಿಸಿ ಅಲ್ಲಿಂದ ಹೊರಡಲು ಯತ್ನಿಸಿದ್ದಾರೆ.

ಆದರೆ, ಆ ಯುವಕ ಅಷ್ಟಕ್ಕೆ ಬಿಡದೆ ಮಾರ್ಕೊ ಅವರ ಕೈಯನ್ನು ಬಲವಾಗಿ ಹಿಡಿದುಕೊಂಡು, ಅವರ ಹಿಂದೆ ನಡೆದು ಬರುತ್ತಾ ಮತ್ತದೇ ಬೇಡಿಕೆಯನ್ನು ಇಟ್ಟಿದ್ದಾನೆ. ಯುವಕನ ನಡವಳಿಕೆಯಿಂದ ತೀವ್ರ ಅಸಹಜತೆ ಹಾಗೂ ಮುಜುಗರಕ್ಕೊಳಗಾದ ಬ್ಲಾಗರ್, ಹೇಗೋ ಆತನಿಂದ ತಪ್ಪಿಸಿಕೊಂಡು ದೂರ ನಡೆದಿದ್ದಾರೆ.

ಘಟನೆಯ ನಂತರ ವಿಡಿಯೋದಲ್ಲಿ ಮಾತನಾಡಿದ ಆಸ್ಟ್ರೇಲಿಯಾ ಪ್ರವಾಸಿಗ, *"ಮೈ ಗಾಡ್! ನನ್ನಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿರುವವರಿಂದಲೇ ನಾನು ಲೈಂಗಿಕ ಕಿರುಕುಳ (Molest) ಎದುರಿಸುವಂತಾಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಾವು ಶೇರ್ ಮಾಡಿದ ವಿಡಿಯೋದ ಮೇಲೆ "ಭಾರತೀಯ ಹುಡುಗರು ಯಾವಾಗಲೂ ಯಾಕೆ ಕಿಸ್ ಕೇಳುತ್ತಾರೆ?" ಎಂಬ ಸಾಲನ್ನು ಬರೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಲೇ ಸಾವಿರಾರು ಜನರು ಆ ಯುವಕನ ವಿಕೃತ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಒಬ್ಬ ಬಳಕೆದಾರ ಪ್ರತಿಕ್ರಿಯಿಸಿ, "ನೀವು ತಪ್ಪು ಭಾರತಕ್ಕೆ ಕಾಲಿಟ್ಟಿದ್ದೀರಿ ಅನ್ಸುತ್ತೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಕೋಲ್ಕತ್ತಾ ಪೊಲೀಸರನ್ನು ಟ್ಯಾಗ್ ಮಾಡಿ, "@kolkatapolice ದಯವಿಟ್ಟು ಈ ಹುಡುಗನಿಗೆ ಕಾನೂನಿನ ಸರಿಯಾದ ಪಾಠ ಕಲಿಸಿ" ಎಂದು ಆಗ್ರಹಿಸಿದ್ದಾರೆ.

ಈ ಘಟನೆಯು ಭಾರತದಲ್ಲಿ ವಿದೇಶಿ ಪ್ರವಾಸಿಗರ ಸುರಕ್ಷತೆ ಹಾಗೂ ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ಮರ್ಯಾದೆಯ ಕುರಿತು ಮತ್ತೊಮ್ಮೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಇಂತಹ ಘಟನೆಗಳು ಇಡೀ ದೇಶದ ಹೆಸರನ್ನು ಕೆಡಿಸುತ್ತವೆ ಎಂದು ಕಳವಳ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕೇವಲ ಒಬ್ಬ ವ್ಯಕ್ತಿಯ ಮೂರ್ಖತನದಿಂದ ಇಡೀ ದೇಶದ ಹುಡುಗರನ್ನು ನಿರ್ಣಯಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

18/06/2026 08:16 pm

Cinque Terre

32.53 K

Cinque Terre

1

ಸಂಬಂಧಿತ ಸುದ್ದಿ