ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RTO ತಪಾಸಣೆಯಿಂದ ತಪ್ಪಿಸಿಕೊಳ್ಳಲು ಹೆದ್ದಾರಿಯಲ್ಲಿ ಇಟ್ಟಿಗೆ ಸುರಿದು ಟ್ರಕ್ ಚಾಲಕ ಪರಾರಿ.!

ಲಕ್ನೋ: ಉತ್ತರ ಪ್ರದೇಶದ ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಘಟನೆಯೊಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಅಕ್ರಮವಾಗಿ ಓವರ್‌ಲೋಡ್ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನೊಬ್ಬ, ಆರ್‌ಟಿಓ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲೇ ಇಟ್ಟಿಗೆಗಳನ್ನು ಸುರಿದು ಪರಾರಿಯಾದ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆರ್‌ಟಿಓ ಅಧಿಕಾರಿಗಳು ಬೆನ್ನಟ್ಟುತ್ತಿದ್ದಾಗ, ರಾಂಗ್‌ ರೂಟ್‌ನಲ್ಲಿ ವಾಹನ ಚಲಾಯಿಸುತ್ತಿದ್ದ ಚಾಲಕ, ವಾಹನವನ್ನು ಹಿಂಬಾಲಿಸದಂತೆ ತಡೆಯಲು ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದಾಗಿ ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ ಉಂಟಾಯಿತು. ಬಳಿಕ, ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ರಸ್ತೆಯನ್ನು ತೆರವುಗೊಳಿಸಲು ಸಹಾಯ ಮಾಡಿದರು.

Edited By : Vijay Kumar
PublicNext

PublicNext

19/06/2026 01:13 pm

Cinque Terre

6.38 K

Cinque Terre

0

ಸಂಬಂಧಿತ ಸುದ್ದಿ