ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದಾನಿ ಷೇರುಗಳತ್ತ SBI ಚಿತ್ತ: 5,748 ಕೋಟಿ ರೂ. ಬ್ಲಾಕ್ ಡೀಲ್‌ಗೆ ಸಹಿ!

ಮುಂಬೈ: ಎಸ್‌ಬಿಐ ಮ್ಯೂಚುವಲ್ ಫಂಡ್, ಅದಾನಿ ಸಮೂಹದ ಎರಡು ಪ್ರಮುಖ ಕಂಪನಿಗಳಲ್ಲಿ ಬೃಹತ್ ಹೂಡಿಕೆ ಮಾಡಿದೆ. ಜೂನ್ 5ರಂದು ನಡೆದ ಬ್ಲಾಕ್ ಡೀಲ್‌ಗಳ ಮೂಲಕ, ಎಸ್‌ಬಿಐ ಮ್ಯೂಚುವಲ್ ಫಂಡ್ ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್‌ನಲ್ಲಿ ಒಟ್ಟು 5,748 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದೆ.

ಈ ವಹಿವಾಟಿನಲ್ಲಿ, ಎಸ್‌ಬಿಐ ಮ್ಯೂಚುವಲ್ ಫಂಡ್ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಶೇ 1.27ರಷ್ಟು ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್‌ನಲ್ಲಿ ಶೇ 0.53ರಷ್ಟು ಪಾಲನ್ನು GQG ಪಾರ್ಟ್‌ನರ್ಸ್‌ನಿಂದ ಪಡೆದುಕೊಂಡಿದೆ. ಈ ಮಹತ್ವದ ಷೇರು ಖರೀದಿ ಪ್ರಕ್ರಿಯೆಯು ಎನ್‌ಎಸ್‌ಇಯಲ್ಲಿ ಮುಕ್ತ ಮಾರುಕಟ್ಟೆ ಒಪ್ಪಂದಗಳ ಮೂಲಕ ಯಶಸ್ವಿಯಾಗಿ ಕಾರ್ಯಗತಗೊಂಡಿದೆ.

Edited By : Vijay Kumar
PublicNext

PublicNext

07/06/2026 02:52 pm

Cinque Terre

6.85 K

Cinque Terre

0

ಸಂಬಂಧಿತ ಸುದ್ದಿ