ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ : ಟಿ.ಎಂ.ಎಸ್. ಸಸ್ಯಮೇಳಕ್ಕೆ ಚಾಲನೆ

ಶಿರಸಿ : ನಗರದ ಪ್ರತಿಷ್ಠಿತ ಟಿ.ಎಂ.ಎಸ್. ಪ್ರಧಾನ ಕಛೇರಿಯಲ್ಲಿ ಸಸ್ಯಮೇಳ ಕಾರ್ಯಕ್ರಮವನ್ನು ನಿನ್ನೆ ಸಂಘದ ಅಧ್ಯಕ್ಷ ಜಿ.ಟಿ.ಹೆಗಡೆ, ತಟ್ಟೀಸರ ರವರು ಉದ್ಘಾಟಿಸಿ ಸಸ್ಯ ಮೇಳದ ಕುರಿತು ಮಾತನಾಡಿದರು.

ಅಲ್ಲದೆ ಸದಸ್ಯರಿಗೆ ಸಾಂಕೇತಿಕವಾಗಿ ಸಸ್ಯಗಳನ್ನು ವಿತರಿಸಿ ವಿವಿಧ ಜಾತಿಯ ಕಾಳುಮೆಣಸು, ತೆಂಗು, ಮಾವು. ಹಲಸು, ಗೇರು, ಹಾಗೂ ವಿವಿಧ ತಳಿಯ ಹಣ್ಣಿನ ಗಿಡಗಳು ಸದಸ್ಯರಿಗೆ ರಿಯಾಯಿತಿ ದರದಲ್ಲಿ ಲಭ್ಯವಿದ್ದು ಸದಸ್ಯರು ಇದರ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಜಿ.ಟಿ.ಹೆಗಡೆ, ತಟ್ಟೀಸರ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ, ಜಿ.ಎಂ.ಹೆಗಡೆ, ಮುಳಖಂಡ, ಸಂಘದ ನಿರ್ದೇಶಕರುಗಳಾದ ರವಿ.ಜಿ.ಹೆಗಡೆ, ಹುಳಗೋಳ, ಎಂ.ಎನ್.ಭಟ್, ಬಿಸ್ಲಕೊಪ್ಪ, ಶ್ರೀಮತಿ ಇಂದಿರಾ ಗೋ ಹೆಗಡೆ, ಹುಳಗೋಳ, ಶ್ರೀಮತಿ ಸೌಭಾಗ್ಯ ನಾ ಹೆಗಡೆ, ಕೆರೆಗದ್ದೆ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಯ ಎನ್ ಹೆಗಡೆ, ಮಂಡೇಮನೆ ಇವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/06/2026 03:43 pm

Cinque Terre

2.16 K

Cinque Terre

0

ಸಂಬಂಧಿತ ಸುದ್ದಿ