ಬೆಳ್ತಂಗಡಿ: ಎಕ್ಸೆಲ್ ಟೆಕ್ನೋ ಸಿಬಿಎಸ್‌ಸಿ ಶಾಲೆಯ ಪ್ರಾರಂಭೋತ್ಸವ "ಲುಮಿನ್ಯಾ - ನವ ಚೇತನದ ಆರಂಭ" ಸಂಭ್ರಮದಿಂದ ನಡೆಯಿತು.
ಗುರುವಾಯನಕೆರೆಯ ವಿದ್ಯಾಸಾಗರ ಕ್ಯಾಂಪಸ್‌ನಲ್ಲಿ ಎಕ್ಸೆಲ್ ಟೆಕ್ನೋ ಸಿಬಿಎಸ್ಇ ಶಾಲೆಯು ವಿದ್ಯಾರ್ಥಿಗಳ ಚುರುಕಿನ ಹೆಜ್ಜೆಗಳಿಂದ ಕಳೆಗಟ್ಟಿತು. ಗಣಪತಿ ಹೋಮದ ಮಂತ್ರಘೋಷ ಹಾಗೂ ಶಿಕ್ಷಕರಿಂದ ಆಯೋಜಿಸಲಾದ ಅರ್ಥಪೂರ್ಣ ಪ್ರಾರ್ಥನಾ ಸಭೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಇಡೀ ಆವರಣವು ಸಕಾರಾತ್ಮಕತೆಯಿಂದ ತುಂಬಿ, ಹೊಸ ಭರವಸೆಯ ಬೆಳಕನ್ನು ಚೆಲ್ಲಿತು.
ಈ ಸಂದರ್ಭ ಎಕ್ಸೆಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುಮಂತ್ ಮಾತನಾಡಿ, ವಿದ್ಯಾರ್ಥಿಗಳು 360 ಡಿಗ್ರಿ ಸರ್ವತೋಮುಖ ಬೆಳವಣಿಗೆಯತ್ತ ಗಮನಹರಿಸಬೇಕು. ಇದಕ್ಕಾಗಿ ಅಗತ್ಯವಿರುವ ಎಲ್ಲ ಬೆಂಬಲವನ್ನು ಸಂಸ್ಥೆಯು ನೀಡಲಿದೆ ಎಂದರು.
ಪ್ರಾಂಶುಪಾಲೆ ಸುಮಿತ್ರಾ ಮಾತನಾಡಿ, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಅಮೂಲ್ಯ ರತ್ನಗಳಾಗಬೇಕು ಎಂದರು.
PublicNext
11/06/2026 03:28 pm
LOADING...